ಹೊಸನಗರ: ‘ಪುಸ್ತಕ ಮಸ್ತಕಕ್ಕಿಳಿದಾಗ ಮನಸ್ಸು ಪರಿವರ್ತನೆಯಾಗುತ್ತದೆ’ ಎಂದು ಹಿರಿಯ ಚಿಂತಕ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತ್ರಿಣಿವೆ ಗ್ರಾಮದ ನಾಗಪ್ಪ ಅವರ ಮನೆಯಲ್ಲಿ ನಡೆದ ‘ಮನೆಯಂಗಳದಲ್ಲಿ ಗ್ರಂಥಾಲಯ’ ಕಾರ್ಯಕ್ರಮ ಉದ್ಘಾಟಿಸಿ ಈಚೆಗೆ ಮಾತನಾಡಿದರು.

‘ಕಾದಂಬರಿಗಳು ಚಲನಚಿತ್ರವಾದಾಗ ಅವು ತನ್ನ ಮಹತ್ವ ಕಳೆದುಕೊಳ್ಳುತ್ತವೆ. ಪ್ರತಿಯೊಂದು ಕಾದಂಬರಿಯ ಸೊಗಸು, ವರ್ಣನೆ ಅದರ ಪ್ರತಿ ಪುಟದಲ್ಲೂ ಅಡಕವಾಗಿರುತ್ತದೆ. ಅದನ್ನು ಚಲನಚಿತ್ರದಲ್ಲಿ ಕಾಣಲು ಸಾಧ್ಯವಿಲ್ಲ. ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿದಾಗ ಸಿಗುವ ಅನುಭೂತಿ, ಸಿನಿಮಾದಿಂದ ಸಿಗುವುದಿಲ್ಲ’ ಎಂದರು.

‘ಮನೆಮನೆಯಲ್ಲೂ ಗ್ರಂಥಾಲಯ ಆಗಬೇಕೆಂಬ ಪ್ರಯತ್ನ ಶ್ಲಾಘನೀಯ’ ಎಂದು ಮಹಾಬಲ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ ಮೂರ್ತಿ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಹನಿಯ ರವಿ ನೂತನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದರು.

ವಕೀಲ ರಾಮಪ್ಪ, ಜಿ.ಎನ್. ಬಸಪ್ಪ ಗೌಡ, ಡಿ.ಎಸ್. ರಾಘವೇಂದ್ರ, ವಿಶ್ವೇಶ್ವರ ಗೌಡ, ರಮಾ, ನವೀನ್ ಕುಮಾರ್, ಕೆ.ಜಿ.ನಾಗೇಶ್, ಕೃಷ್ಣಮೂರ್ತಿ ತೊಗರೆ, ಇದ್ದರು. ಅಶ್ವಿನಿ ಪಂಡಿತ್ ನಿರೂಪಿಸಿದರು. ಶಿವಾನಂದಪ್ಪ ಸ್ವಾಗತಿಸಿದರು. ಶುಭ ದಿನೇಶ್ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-42-2119625362

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.