ರಿಪ್ಪನ್ಪೇಟೆ: ‘ಹೊಸನಗರ ಕ್ಷೇತ್ರ ಪುನರ್ ರಚನೆ ಕುರಿತು ಎದ್ದಿರುವ ಹೋರಾಟದ ಕೂಗು ಅರ್ಥಹೀನ’ ಎಂದು ಜನಹಿತ ರಂಗದ ರಾಜ್ಯ ಸಂಚಾಲಕ ವಾಟಗೋಡು ಸುರೇಶ್ ಟೀಕಿಸಿದರು.

‘ಹೊಸನಗರ ಮತ್ತು ರಿಪ್ಪನ್ಪೇಟೆ ಭಾಗದ ರಾಷ್ಟ್ರೀಯ ಪಕ್ಷದ ಸ್ಥಳೀಯ ಮುಖಂಡರು ಹಿರಿಯ ನಾಯಕರೊಂ ದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ನಿಕಟ ಸಂಪರ್ಕದಲ್ಲಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಸಹ, ಸ್ಥಳೀಯ ಮುಖಂಡರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಹೊಸನಗರ ಕ್ಷೇತ್ರ ರಚನೆಯ ಕುರಿತು ಪಾದಯಾತ್ರೆ, ಪ್ರತಿಭಟನೆಗೆಂದು ಬೀದಿಗೆ ಇಳಿಯುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಇಲ್ಲಿ ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕ್ಷೇತ್ರ ಪುನರ್ ವಿಂಗಡಣೆ ರಾಷ್ಟ್ರೀಯ ನಿಯಮ ಕುರಿತು ಯಾವುದೇ ವಿಧೇಯಕಗಳು ಲೋಕಸಭೆಯಲ್ಲಿ ಮಂಡನೆಯಾಗಿಲ್ಲ. ಒಂದು ಕ್ಷೇತ್ರ ಹೆಚ್ಚಿಸಲು ರಾಜ್ಯಕ್ಕೆ ಅವಕಾಶವಿಲ್ಲ. ದೆಹಲಿಯ ಸಂಸತ್ ಭವನದಲ್ಲಾಗುವ ಕೆಲಸವನ್ನು ರಿಪ್ಪನ್ಪೇಟೆ ಆಟದ ಮೈದಾನದಲ್ಲಿ ನಿರ್ಣಯಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಹೊಸನಗರ ತಾಲ್ಲೂಕಿನಲ್ಲಿ ಮುಳುಗಡೆ ಸಂತ್ರಸ್ತರ ಬಗರ್ ಹುಕುಂ ಹೋರಾಟ, ವಿದ್ಯುತ್ ಹಾಗೂ ಅರಣ್ಯಭೂಮಿಯಂತಹ ಜ್ವಲಂತ ಸಮಸ್ಯೆಗಳನ್ನು ಎಲ್ಲಾ ರಾಷ್ಟ್ರೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಮುನ್ನೆಲೆಗೆ ತಂದು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಸೀಮಿತಗೊಳಿಸಿದೆ ’ ಎಂದರು

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಸದಸ್ಯ ಅಮಿರ್ ಹಂಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-42-1231834048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.