ಹೊಸನಗರ: ತಾಲ್ಲೂಕಿನ ಜಯನಗರ ಪ್ರೌಢಶಾಲೆಯಲ್ಲಿ 2004–05ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಿತು.

ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸ್ಮರಿಸಿ, ನೆನಪಿನ ಕಾಣಿಕೆ ನೀಡಿ ವಿದ್ಯಾರ್ಥಿಗಳು ಸಂಭ್ರಮಿಸಿದರು.

ಮುಖ್ಯ ಶಿಕ್ಷಕರಾದ ಶ್ರೀಪತಿ, ಕೆ.ಪಿ. ಶ್ರೀಧರ್, ಗಂಗಪ್ಪ, ಗಣಪತಿ ಆರ್., ರಮೇಶ್ ಅಶ್ವಿನ್, ಮಹಾಲಕ್ಷ್ಮಿ, ಪವಿತ್ರ, ಸುಮಲತಾ, ಸುರೇಂದ್ರ, ಪುಟ್ಟಪ್ಪ ಅವರ ಸೇವೆಗೆ ಗೌರವ ಸಲ್ಲಿಸಲಾಯಿತು.

ಗುರುವಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕರು, ‘ಶ್ರದ್ಧೆ, ಆತ್ಮಸ್ಥೈರ್ಯದಿಂದ ವಿದ್ಯಾಭ್ಯಾಸ ಮಾಡಿದರೆ ನೆಮ್ಮದಿಯ ಜೀವನ ಕೊಂಡುಕೊಳ್ಳಬಹುದು ಎಂದರು.

ಕಲಿಕೆಗೆ ವಯೋಮಿತಿ ಇಲ್ಲ. ಯಾವುದೇ ಕೆಲಸ ಮೇಲು ಕೀಳಲ್ಲ. ಕಾಯಕವನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಎಂ. ಸೌಮ್ಯ ಸ್ವಾಗತಿಸಿದರು. ಅಶ್ವಿನಿ ಪಂಡಿತ್ ಹಾಗೂ ಶಿಲ್ಪ. ಕೆ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-42-1052360231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.