ಹೊಸನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಿವಮೊಗ್ಗ– ಶೃಂಗೇರಿ– ಮಂಗಳೂರು ರೈಲು ಮಾರ್ಗ ನಿರ್ಮಾಣದ ವಿಸ್ತೃತ ಯೋಜನಾ ವರದಿಯಲ್ಲಿ ಹೊಸನಗರವನ್ನು ಕೈ ಬಿಡಲಾಗಿದ್ದು, ಕೂಡಲೇ ರೈಲ್ವೆ ಸಂಪರ್ಕ ಯೋಜನೆಯ ಡಿಪಿಆರ್ನಲ್ಲಿ ಹೊಸನಗರವನ್ನು ಸೇರಿಸುವಂತೆ ವರ್ತಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಗ್ರಹಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸಮಾವೇಶಗೊಂಡ ವರ್ತಕರ ಸಂಘದ ಸದಸ್ಯರು ತಹಶೀಲ್ದಾರ್ ಭರತ್ರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

‘2018ರಲ್ಲಿ ಸಚಿವರಾಗಿದ್ದ ಡಿ.ವಿ. ಸದಾನಂದಗೌಡರು ನೀಡಿದ್ದ ಭರವಸೆಯಂತೆ ಹೊಸನಗರವನ್ನು ಈ ಯೋಜನೆಯಲ್ಲಿ ಸೇರಿಸಬೇಕು. ಆದರೆ, ಅರಸಾಳು– ರಿಪ್ಪನ್ಪೇಟೆ– ತೀರ್ಥಹಳ್ಳಿ ಮೂಲಕ ಮಾರ್ಗ ನಿರ್ಮಿಸುವ ಚರ್ಚೆ ನಡೆಯುತ್ತಿದ್ದು, ಇದರಿಂದ ಹೊಸನಗರಕ್ಕೆ ಅನ್ಯಾಯವಾಗಲಿದೆ’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣೇಶ್ ಮಲೆಬೈಲ್ ಆಕ್ರೋಶ ವ್ಯಕ್ತಪಡಿಸಿದರು.

‘ಉದ್ದೇಶಿತ ರೈಲು ಮಾರ್ಗವು ಅರಸಾಳು, ರಿಪ್ಪನ್ಪೇಟೆ, ಹೊಸನಗರ, ತೀರ್ಥಹಳ್ಳಿ ಮೂಲಕವೇ ಹಾದುಹೋಗುವಂತೆ ಡಿಪಿಆರ್ ಸಿದ್ಧಪಡಿಸಬೇಕು. ಈ ಬಗ್ಗೆ ಸಂಸದರಿಗೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗುವುದು. ನಮ್ಮ ಬೇಡಿಕೆಯನ್ನು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಪ್ರಮುಖರಾದ ಎನ್.ಆರ್. ದೇವಾನಂದ್, ಹಾಲಗದ್ದೆ ಉಮೇಶ್, ಜಯರಾಮ್ ಶೆಟ್ಟಿ, ವರ್ತಕರ ಸಂಘದ ಸುರೇಶ ಬಿ.ಎಸ್, ಹರೀಶ್ ರಾವ್, ವಿಜೇಂದ್ರ ಶೇಟ್, ಭೋಜಪ್ಪ ಗೌಡ, ಸಂತೋಷ್ ಶೇಟ್, ವಿನಾಯಕ ಹೆದ್ಲಿ, ವಾದಿರಾಜ್, ಉದಯ್ ಕುಮಾರ್, ಲೋಕೇಶ್ ಆದುವಳ್ಳಿ ವಿಟ್ಟಲ್ ರಾವ್, ನರಸಿಂಹ ರಾಮ್ ಪಟೇಲ್, ರವಿ ಶೇಟ್, ರಾಘವೇಂದ್ರ ಅರಳಸುರಳಿ, ಗುರುರಾಜ ಎರಗಿ, ಗೋಪಾಲ ಚೌಹಾನ್, ಕೇಶವ್ ರಾಘವೇಂದ್ರ, ರವಿ ಶೆಟ್ಟಿ, ವೆಂಕಟೇಶ್, ಗಜಾನನ ರಾಘವೇಂದ್ರ ಸೇರಿ ಹಲವರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-42-19360839

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.