ಹೊಸನಗರ: ರಾಮಚಂದ್ರಾಪುರ ಮಠದಲ್ಲಿ ಶ್ರೀರಾಮನ ಉಪಾಸನೆಯ ರಾಮೋತ್ಸವಕ್ಕೆ ಸಿದ್ಧತೆ ನಡೆದಿದೆ.

ಮಾರ್ಚ್ 24ರಿಂದ 29ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷವಾಗಿ ಪೂಗ ಪೂಜೆ, ವಿರಾಟ್ ಶ್ರೀರಾಮ ಪೂಜೆ ಹಾಗೂ ಮಾತೃ ಸಮಾವೇಶ ನಡೆಯಲಿವೆ.

ಮಾ 24ರಂದು ಕಂಕಣ, ಧ್ವಜಾರೋಹಣ, ಶಿಬಿಕಾ ಯಂತ್ರೋತ್ಸವ ನಡೆಯಲಿವೆ. ಮಾ 25ರ ಬೆಳಿಗ್ಗೆ ಗರುಡೋತ್ಸವ, ಸಂಜೆ ಶ್ರೀರಾಘವೇಶ್ವರ ಭಾರತಿ ಶ್ರೀಗಳ ದಿವ್ಯಾಗಮನ, ಪೂರ್ಣಕುಂಭ ಸ್ವಾಗತ ನಂತರ ದೀಪಮಾಲಿಕೆ ಕಾರ್ಯಕ್ರಮ ನಡೆಯಲಿದೆ.

ಮಾ 26ರಂದು ಪುಷ್ಪ ರಥೋತ್ಸವ, ಅಖಂಡ ಭಜನೆ ಆರಂಭವಾಗಲಿದೆ. ಮಾ 27ರಂದು ಶ್ರೀರಾಮ ಜನ್ಮೋತ್ಸವ, ಶ್ರೀಮನ್ಮಹಾರಥೋತ್ಸವ, ವಿರಾಟ್ ಶ್ರೀರಾಮಪೂಜೆ ಹಾಗೂ ಆಶೀರ್ವಚನ ಜರುಗಲಿದೆ.

ಮಾ 28 ರಂದು ಕುಂಕುಮೋತ್ಸವ, ವೈಷ್ಣವ ಮೃಗಯಾತ್ರೆ, 29 ರಂದು ಅವಭೃತ ಅಂಕುರ ಪ್ರಸಾದದೊಂದಿಗೆ ರಾಮೋತ್ಸವದ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-42-101466585

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.