ಶುಕ್ರವಾರ, ಅಕ್ಟೋಬರ್ 22, 2021
20 °C

ಸುಟ್ಟ ಕಾರಿನ ಮಾಲೀಕರ ಗುರುತು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನಂದಪುರ: ತೀರ್ಥಹಳ್ಳಿ ತಾಲ್ಲೂಕಿನ ಮಿಟ್ಲುಗೋಡು ಸಮೀಪದ ದಟ್ಟ ಅರಣ್ಯದಲ್ಲಿ ಸುಟ್ಟ ಕಾರು ಆನಂದಪುರ ಸಮೀಪದ ಚನ್ನಕೊಪ್ಪದ ವಿನೋದ್ ಕುಮಾರ್ ಅವರಿಗೆ ಸೇರಿದೆ ಎಂದು ತಿಳಿದುಬಂದಿದೆ.

ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿ ಯಾರು ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ವಿನೋದ್ ಕುಮಾರ್ 4 ದಿನಗಳಿಂದ ಮನೆಗೆ ಬಂದಿರಲಿಲ್ಲ. ಅವರು ಹರ್ಬಲ್ ಲೈಫ್ ಆಯುರ್ವೇದಿಕ್ ಔಷಧಗಳ ವ್ಯವಹಾರ ಮಾಡುತ್ತಿದ್ದರು. ಔಷಧಗಳ ವ್ಯವಹಾರಕ್ಕಾಗಿ ಹೋಗಿರಬೇಕು ಎಂದು ತಿಳಿದುಕೊಂಡಿದ್ದೆವು. ಕೆಲವು ವೇಳೆ ಮೂರು ದಿನಗಳಾದರೂ ಮನೆಗೆ ಬರುತ್ತಿರಲಿಲ್ಲ. ಹಾಗಾಗಿ ಸುಮ್ಮನಿದ್ದೆವು. ಎರಡು ದಿನದ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸುಟ್ಟ ಕಾರಿನ ಫೋಟೊ ಬಂದಾಗ ವಿನೋದ್ ಕಾರು ಎಂದು ತಿಳಿಯಿತು’ ಎಂದು ಅವರ ಕುಟುಂಬದ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಕುಟುಂಬ ಸದಸ್ಯರ ರಕ್ತದ ಮಾದರಿ ನೀಡಲಾಗಿದೆ. ವಿನೋದ್ ಕುಮಾರ್ ಅವರ ಪುತ್ರನನ್ನು ಪೊಲೀಸರು ವಿಚಾರಣೆಗೆ ಕರೆಸಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.