ಭದ್ರಾವತಿ : ನಗರದ ದೊಣಬಘಟ್ಟದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ ಮಾಡಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 10 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಗ್ರಾಮದ ನಸರುಲ್ಲಾ, ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ಮಾಡಲು ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ನಿರೀಕ್ಷಕ ಮಂಜು ಎಂ., ಪಿಎಸ್‌ಐ ಶಿಲ್ಪಾ, ಸಿಬ್ಬಂದಿಯಾದ ಎಎಸ್‌ಐ ಅರುಣ್ ಕುಮಾರ್, ತನಿಖಾ ಸಹಾಯಕರಾದ ಎಚ್.ಸಿ ಬಸವರಾಜ, ಸಿಸಿ ರಾಘವೇಂದ್ರ, ಉಮೇಶ, ಪ್ರಕಾಶ ಜಿ.ಕೆ. ಅವರ ತಂಡ ದಾಳಿ ನಡೆಸಿದೆ.
ಪೊಲೀಸರು ಆರೋಪಿ ನೂರುಲ್ಲಾ ಅವರನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.