ಭದ್ರಾವತಿ: ಸೈಲ್-ವಿಐಎಸ್ಎಲ್ ಇಸ್ಪಾತ್ ಮಹಿಳಾ ಸಮಾಜದಲ್ಲಿ ಭಾನುವಾರ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ವಿಐಎಸ್ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಅನೂಪ್ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, "ಮಹಿಳೆಯರು ಇಂದು ಮುಖ್ಯವಾಹಿನಿಯ ಎಲ್ಲ ಕ್ಷೇತ್ರಗಳಲ್ಲಿ ಕ್ರಿಯಾಶೀಲ ಪಾತ್ರ ನಿರ್ವಹಿಸುತ್ತಾ ದೇಶದ ಅಭಿವೃದ್ಧಿಯ ವೇಗ ಹೆಚ್ಚಿಸುವಲ್ಲಿ ನೆರವಾಗುತ್ತಿದ್ದಾರೆ," ಎಂದರು. ಉನ್ನತ ಹಾಗು ವೃತ್ತಿಪರ ಶಿಕ್ಷಣದಲ್ಲೂ ಹೆಣ್ಣು ಮಕ್ಕಳ ಸಾಧನೆ ಪ್ರಶಂಸನೀಯವಾಗಿದೆ, ಎಂದರು.

ಹೊಲಿಗೆ ತರಬೇತಿ ಕೇಂದ್ರವನ್ನು ಈ ಸಂದರ್ಭ ಉದ್ಘಾಟಿಸಲಾಯಿತು. ಕಾರ್ಖಾನೆ ಮುಖ್ಯ ಮಹಾಪ್ರಬಂಧಕ (ಮಾನವ ಸಂಪನ್ಮೂಲ) ಬಿ.ವಿಶ್ವನಾಥ್, ಮಹಾಪ್ರಬಂಧಕ (ಸ್ಥಾವರ) ಟಿ.ರವಿಚಂದ್ರನ್, ಮಹಿಳಾ ಸಮಾಜದ ಪದಾಧಿಕಾರಿಗಳಾದ ನಿಶಾ ಶ್ರೀವಾಸ್ತವ, ಪಂಕಜಾ ವಿಶ್ವನಾಥ್, ಈಶ್ವರಿ ಕುತಲನಾದನ್, ವಿನೋದಾ, ಪ್ರತಿಭಾ, ಶ್ರವಂತಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.