ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈಸೂರು ದಂಗೆ’ ಹೋರಿ ಅಂತ್ಯಸಂಸ್ಕಾರ

Last Updated 6 ಮಾರ್ಚ್ 2021, 2:34 IST
ಅಕ್ಷರ ಗಾತ್ರ

ಶಿಕಾರಿಪುರ: ತಾಲ್ಲೂಕಿನ ಈಸೂರು ಗ್ರಾಮದ ‘ಈಸೂರು ದಂಗೆ’ ಹೆಸರಿನ ಹೋರಿ ಮೃತಪಟ್ಟಿದ್ದು, ಗ್ರಾಮಸ್ಥರು ಹಾಗೂ ಹೋರಿ ಅಭಿಮಾನಿಗಳು ರಾಷ್ಟ್ರಧ್ವಜ ಹಿಡಿದು ಶುಕ್ರವಾರ ಮೆರವಣಿಗೆ ನಡೆಸುವ ಮೂಲಕ ದೇಶಕ್ಕಾಗಿ ಹೋರಾಡಿ ಮೃತಪಟ್ಟ ಯೋಧನ ರೀತಿ ಹೋರಿಯ ಮೆರವಣಿಗೆ,ಅಂತ್ಯ ಸಂಸ್ಕಾರ ನಡೆಸಿದರು.

ದೇಶದಲ್ಲಿಯೇ ಈಸೂರು ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಖ್ಯಾತಿ ಪಡೆದಿದೆ. ಪ್ರಥಮ ಸ್ವಾತಂತ್ರ್ಯ ಗ್ರಾಮ ಎಂದು ಈಸೂರನ್ನು ಕರೆಯಲಾಗುತ್ತದೆ. ಇಂತಹ ಗ್ರಾಮದಲ್ಲಿ ‘ಈಸೂರು ದಂಗೆ’ ಎಂಬ ಹೆಸರಿನಲ್ಲಿರುವ ಹೋರಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿ ಗೆಲುವು ಸಾಧಿಸುವ ಮೂಲಕ ಪ್ರಖ್ಯಾತಿ ಪಡೆದಿತ್ತು. ರಾಜ್ಯ ಹಾಲುಮತ ಮಹಾಸಭಾದ ಉಪಾಧ್ಯಕ್ಷ, ದಂತ ವೈದ್ಯ ಡಾ.ಪ್ರಶಾಂತ್ ಈ ಹೋರಿಯ ಮಾಲೀಕರಾಗಿದ್ದು, ಈಸೂರು ಗ್ರಾಮದ ಮಂಜು ಹೋರಿ ಪೋಷಣೆ ಮಾಡುತ್ತಿದ್ದರು.

ಈ ಹೋರಿ ಗುರುವಾರ ಮೃತಪಟ್ಟಿದ್ದು, ಹೋರಿ ಅಭಿಮಾನಿಗಳಲ್ಲಿ ದುಃಖ ತರಿಸಿದೆ. ಸಾವಿರಾರು ಹೋರಿ ಅಭಿಮಾನಿಗಳು ಈಸೂರು ಗ್ರಾಮದಲ್ಲಿ ನಡೆದ ಹೋರಿಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಮೆರವಣಿಗೆ ವೇಳೆ ಗ್ರಾಮದ ಮಹಿಳೆಯರು ಹೋರಿ ಮೃತದೇಹಕ್ಕೆ ಪೂಜೆ ಸಲ್ಲಿಸಿದರು. ನಂತರ ಮಂಜು ಅವರ ತೋಟದಲ್ಲಿಸಂಜೆ ಅಂತ್ಯಸಂಸ್ಕಾರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT