ಕಾರ್ಗಲ್: ‘ವಿಶ್ವ ವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಪಶ್ಚಿಮ ಘಟ್ಟದ ಮಹತ್ವ ತಿಳಿಸುವ ಭವನ ನಿರ್ಮಿಸಲು ಚಿಂತಿಸಲಾಗಿದೆ’ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಮೊಹಮ್ಮದ್ ತಬ್ರೇಜ್ ಆಲಂ ಷರೀಫ್ ತಿಳಿಸಿದರು.

ಜೋಗ ಜಲಪಾತದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಬುಧವಾರ ವೀಕ್ಷಿಸಿ ಮಾತನಾಡಿದರು.

‘ಕ್ಷೇತ್ರದ ಶಾಸಕರೊಂದಿಗೆ ಭವನ ನಿರ್ಮಾಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಸೂಕ್ತ ಸ್ಥಳಾವಕಾಶ ಕೋರಲಾಗಿದೆ. ಜೋಗ ಜಲಪಾತ ಪ್ರದೇಶದಲ್ಲಿ ₹ 183 ಕೋಟಿ ವೆಚ್ಚದಲ್ಲಿ ಪರಿಸರಕ್ಕೆ ಯಾವುದೇ ಧಕ್ಕೆ ಬಾರದ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿರುವುದು ಶ್ಲಾಘನೀಯ ವಿಚಾರ. ಹಿಂದಿನಿಂದಲೂ ತಲೆ ಎತ್ತಿ ನಿಂತಿದ್ದ ಗಿಡ ಮರಗಳನ್ನು ಯಥಾ ಸ್ಥಿತಿಯಲ್ಲಿ ಸಂರಕ್ಷಣೆ ಮಾಡಿ, ಅವುಗಳನ್ನು ಕಟ್ಟಡಗಳ ವಿನ್ಯಾಸದ ನಡುವೆಯೇ ಉಳಿಸಿ ಬೆಳೆಸಿಕೊಂಡು ಬಂದಿರುವುದು ಪ್ರಮುಖವಾಗಿ ಕಂಡು ಬರುತ್ತಿದೆ’ ಎಂದರು.

‘ಬೇರೆ ಬೇರೆ ಪ್ರವಾಸಿ ತಾಣಗಳಲ್ಲಿ ಈ ರೀತಿಯ ಯೋಜನೆಗಳನ್ನು ಅಭಿವೃದ್ಧಿ ಕೆಲಸಗಳ ಜೊತೆಯಲ್ಲೇ ನಡೆಸುವಂತೆ ಪ್ರವಾಸೋದ್ಯಮ ಇಲಾಖೆಗೆ ಸಲಹೆ ನೀಡಲಾಗುವುದು. ತಳಕಳಲೆ ಹಿನ್ನೀರಿನ ಪ್ರದೇಶ ಮತ್ತು ಲಿಂಗನಮಕ್ಕಿ ಜಲಾನಯನ ಪ್ರದೇಶದ ಹಿನ್ನೀರಿನ ತಾಣಗಳು ನಿಸರ್ಗ ನೀಡಿದ ಅತಿ ಮುಖ್ಯ ಕೊಡುಗೆಯಾಗಿವೆ. ಮುಂದಿನ ತಲೆಮಾರಿಗೆ ಇವುಗಳನ್ನು ಉಳಿಸಿ ಬೆಳೆಸುವ ಕೆಲಸಕ್ಕೆ ಯುವ ಜನತೆ ಮುಂದಾಗುವಂತೆ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

‘ದೇಶಕ್ಕೆ ವಿದ್ಯುತ್ ಅಗತ್ಯತೆ ಹೆಚ್ಚಿರುವ ಕಾರಣ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನಿವಾರ್ಯವಾಗಿದೆ. ಪಶ್ಚಿಮ ಘಟ್ಟದ ಉಳಿವಿಗಾಗಿ ಇತಿಹಾಸದಲ್ಲಿ ದಾಖಲಾಗಿರುವ ಪ್ರಮುಖ ಮೈಲುಗಲ್ಲುಗಳು ಮತ್ತು ರಾಣಿ ಚೆನ್ನಾ ಭೈರಾದೇವಿಯ ಆಳ್ವಿಕೆಯ ಕಾಲದ ಬಗ್ಗೆ ಕಾನೂರು ಕೋಟೆಯ ಪ್ರದೇಶದಲ್ಲಿ ಅತಿ ಶೀಘ್ರವಾಗಿ ವಿಚಾರ ಸಂಕಿರಣ ಏರ್ಪಡಿಸಲಾಗುವುದು’ ಎಂದು ಹೇಳಿದರು.

ಕೆಪಿಸಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಉಮಾಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಡಿ. ಗುರುರಾಜ್, ವಲಯಾರಣ್ಯಾಧಿಕಾರಿ ರಾಘವೇಂದ್ರ ಅಗಸೆ, ಉಪ ವಲಯಾರಣ್ಯಾಧಿಕಾರಿಗಳಾದ ನೂರ್ ಅಹ್ಮದ್, ಇರ್ಫಾನ್ ಮುಂತಾದವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-42-1636519948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.