ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನ ಹೋರಾಟದ ದಿನಗಳನ್ನು ನೆನಪಿಸಿಕೊಂಡ ಕಾಗೋಡು ತಿಮ್ಮಪ್ಪ

ಮಲೆನಾಡಿನ ಹೋರಾಟದ ದಿನಗಳನ್ನು ನೆನಪಿಸಿಕೊಂಡು ಕಾಗೋಡು ತಿಮ್ಮಪ್ಪ
Last Updated 20 ಆಗಸ್ಟ್ 2022, 5:09 IST
ಅಕ್ಷರ ಗಾತ್ರ

ಶಿವಮೊಗ್ಗ: ಸಮಾಜವಾದಿ ನೆಲೆಯಾಗಿದ್ದ ಶಿವಮೊಗ್ಗ ಜಿಲ್ಲೆ ಈಗ ಕೋಮುವಾದದತ್ತ ಹೊರಳಿರುವುದು ಅತ್ಯಂತ ದುರಾದೃಷ್ಠಕರ ಬೆಳವಣಿಗೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಪ್ರೆಸ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ದೇವರಾಜ ಅರಸು ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈವಿಧ್ಯತೆಯಲ್ಲಿ ಏಕತೆ ಇರುವ ಈ ದೇಶದಲ್ಲಿ ಬದಲಾವಣೆ ತರುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಹೇಳಿದರು.

‘ಬಹು ಸಂಸ್ಕೃತಿ ಇಲ್ಲಿರುವುದರಿಂದ ಬದಲಾವಣೆ ತಕ್ಷಣದ ಮಾತಲ್ಲ. ಭೂಮಿ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲಿಯೂ ಹೋರಾಟ ಮಾಡಬೇಕಿದೆ. ನಾನು ಕೂಡ ಗೇಣಿದಾರನ ಮಗ. ದೇಶಕ್ಕೆ ಸ್ವಾತಂತ್ರ್ಯ ಬಂದರೂ ನಮಗೆ ಗುಲಾಮಗಿರಿ ತಪ್ಪಿರಲಿಲ್ಲ. ಭೂಮಿ ಹಕ್ಕಿಗಾಗಿ 1950ರಿಂದಲೇ ಹೋರಾಟ ಆರಂಭವಾಗಿತ್ತು. 1962ರಲ್ಲಿ ಭೂ ಸುಧಾರಣೆ ಕಾನೂನು ಬಂತು. ಆದರೆ, 1979ರವರೆಗೂ ಅದು ಜಾರಿಗೆ ಬರಲಿಲ್ಲ. 1972ರಲ್ಲಿ ನಾನು ವಿಧಾನ ಸಭೆಗೆ ಹೋದೆ. ದೇವರಾಜ ಅರಸು ಸಿಎಂ ಆಗಿದ್ದರು. ಅದೊಂದು ಸುಸಂದರ್ಭ‌ವಾಗಿತ್ತು. ಗೇಣಿದಾರರ ಸಮಸ್ಯೆ ಪರಿಹಾರಕ್ಕೆ ದೇವರಾಜ ಅರಸು ಮುಖ್ಯಮಂತ್ರಿ ಆಗಿ ಬರಬೇಕಾಯಿತು. ಸಿಎಂ ಅರಸು ಮತ್ತು ದೇವೇಗೌಡರ ಬಳಿ ಮಾತನಾಡಿದೆ. ಕಾನೂನು ಜಾರಿಗೆ ಬಂದಿಲ್ಲವೆಂದರೆ ಜನರಿಗೆ ಮಾಡಿದ ಅನ್ಯಾಯವೆಂದು ಹೇಳಿದ್ದೆ’ ಎಂದು ನೆನಪಿಸಿಕೊಂಡರು.

‘ಬಳಿಕ ಅರಸು 15 ಜನರ ಸಮಿತಿ‌ ಮಾಡಿ ಅದರಲ್ಲಿ ನನ್ನನೂ ಸೇರಿಸಿದ್ದರು. ಸಮಿತಿ ನೀಡಿದ ವರದಿ ಆಧರಿಸಿ ಕಾನೂನು ಜಾರಿಯಾಗಿ ಅನೇಕರಿಗೆ ಭೂ ಒಡೆತನ ಸಿಕ್ಕಿತು. 1951ರಲ್ಲಿ ‌ಚಳವಳಿ ಆರಂಭವಾದರೂ ಸಂಪೂರ್ಣ ಜಾರಿಗೆ ಬರಲು 22 ವರ್ಷ ಕಾಯಬೇಕಾಯಿತು. ನನ್ನ ಜೀವನದ ಅತ್ಯಂತ ಸೌಭಾಗ್ಯದ ಕ್ಷಣವೆಂದರೆ ಭೂ ರಹಿತರಿಗೆ ಭೂಮಿ ಕೊಡಿಸಿದ್ದು. ಭೂಮಿ ಕಳೆದುಕೊಂಡ ಭೂ ಮಾಲೀಕರು ಇಂದಿಗೂ ಕೂಡ ಕಾಗೋಡು ಕಾಲು ಮುರೀಬೇಕು ಎಂದು ಕಾಯುತ್ತಿದ್ದಾರೆ.
ಆದರೆ ಹೋರಾಟದಿಂದ ಫಲ ಕಂಡವರು ನೆನಪಿಟ್ಟುಕೊಂಡರೆ ಸಾಕು‘ ಎಂದರು.

ಶಿವಮೊಗ್ಗ ಜಿಲ್ಲೆ ಹೋರಾಟದ ಹಿನ್ನೆಲೆ ಹೊಂದಿದೆ. ಹೋರಾಟ ಬೇರೆ ಬೇರೆ ವಿಷಯಗಳಲ್ಲಿ ಮುಂದುವರಿಯ ಬೇಕಿದೆ. ಬದಲಾವಣೆಯಾಗಬೇಕೆಂದರೆ ಶಿಕ್ಷಣ ಮುಖ್ಯವಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಬದಲಾವಣೆ ತರಬೇಕಿದೆ. ಸಾಮಾಜಿಕ ನ್ಯಾಯ ಕೊಡುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ನಾಗರಾಜ್ ನೇರಿಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT