ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡಿನೊಂದಿಗೆ ಸಾಹಿತ್ಯಕ ನಂಟು ಹೊಂದಿದ್ದ ರಾಜಶೇಖರ್

Last Updated 22 ಜುಲೈ 2022, 5:43 IST
ಅಕ್ಷರ ಗಾತ್ರ

ಸಾಗರ: ಅಗಲಿದ ಲೇಖಕ ಜಿ.ರಾಜಶೇಖರ್ ಅವರಿಗೂ ಮಲೆನಾಡು ಪ್ರದೇಶಕ್ಕೂ ಸಾಹಿತ್ಯಕ ನಂಟು ದೀರ್ಘಕಾಲದಿಂದ ಬೆಳೆದಿದ್ದು, ಅವರ ನಿರ್ಗಮನ ಈ ಭಾಗದ ಸಾಹಿತ್ಯ ಪ್ರಿಯರಿಗೆ ನೋವು ತಂದಿದೆ.

ಇಲ್ಲಿನ ಐತಿಹಾಸಿಕ ಕಾಗೋಡು ಸತ್ಯಾಗ್ರಹದ ಕುರಿತು ಜಿ.ರಾಜಶೇಖರ್ ಅವರು ಬರೆದಿರುವ ಕೃತಿ ಕರ್ನಾಟಕದ ಹೋರಾಟಗಳ ಕುರಿತು ಈವರೆಗೆ ಬಂದಿರುವ ಅತ್ಯುತ್ತಮ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹಲವು ತಿಂಗಳುಗಳ ಕಾಲ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಸುತ್ತಾಡಿ ಕ್ಷೇತ್ರ ಕಾರ್ಯ ನಡೆಸಿ ಕಾಗೋಡು ಸತ್ಯಾಗ್ರಹದ ಕುರಿತು ಜಿ. ರಾಜಶೇಖರ್ ಮಾಹಿತಿ ಸಂಗ್ರಹಿಸಿದ್ದರು.

ಕಾಗೋಡು ಸತ್ಯಾಗ್ರಹವನ್ನು ಅದನ್ನು ನಡೆಸಿದ ‘ನಾಯಕ’ರ ದೃಷ್ಟಿಕೋನದಿಂದ ನೋಡದೆ ‘ಜನರ’ ದೃಷ್ಟಿಕೋನದಿಂದ ವಿಶ್ಲೇಷಿಸಿದ ಕಾರಣಕ್ಕೆ ಅವರ ಕೃತಿ ಹೆಚ್ಚು ಮೌಲಿಕ ಎಂಬ ಅಭಿಪ್ರಾಯ ವಿಮರ್ಶಾ ವಲಯದಲ್ಲಿ ಮೂಡಿಬಂದಿದೆ.

ಕಾಗೋಡು ಸತ್ಯಾಗ್ರಹದಲ್ಲಿ ಪಾಲ್ಗೊಂಡು ತೆರೆಮರೆಯಲ್ಲಿ ಕೆಲಸ ಮಾಡಿದ ಹಲವು ಪ್ರಮುಖರನ್ನು ರಾಜಶೇಖರ್ ತಮ್ಮ ಕೃತಿಯಲ್ಲಿ ಗುರುತಿಸಿದ್ದಾರೆ. ಇದರ ಜೊತೆಗೆ ಯಾರನ್ನೂ ವೈಭವೀಕರಣ ಮಾಡದೆ ಒಮ್ಮೆ ಚಳವಳಿ ನಡೆಸಿದವರು ನಿರ್ಣಾಯಕ ಘಟ್ಟದಲ್ಲಿ ಭಿನ್ನ ಹಾದಿ ಹಿಡಿದು ರಾಜಕೀಯ ನೆಲೆ ಕಂಡು ಕೊಳ್ಳ ಲು ಮುಂದಾಗಿದ್ದನ್ನು ಕೂಡ ವಾಸ್ತವ ನೆಲೆಗಟ್ಟಿನಲ್ಲಿ ಕಥನವಾಗಿಸಿದ್ದಾರೆ.

90ರ ದಶಕದಿಂದಲೂ ಈ ಭಾಗದಲ್ಲಿ ಯಾವುದೇ ಪ್ರಮುಖ ಸಾಹಿತ್ಯ ಸಮಾರಂಭಗಳಾದರೆ ಜಿ.ರಾಜಶೇಖರ್ ಹಾಜರಾತಿ ಎದ್ದುಕಾಣುತ್ತಿತ್ತು. ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಅನೇಕ ಬಾರಿ ಅವರು ಸಮಕಾಲೀನ ವಿದ್ಯಮಾನಗಳ ಕುರಿತು ಅತ್ಯಂತ ನಿಷ್ಠುರತೆಯಿಂದ ಮಾತನಾಡಿ ಗಮನ ಸೆಳೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT