ಶನಿವಾರ, ಜುಲೈ 24, 2021
25 °C
ತಜ್ಞರ ಅಭಿಪ್ರಾಯ ಕಲೆ ಹಾಕಿದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ

ಶಾಲೆಗಳ ಆರಂಭ 6 ತಿಂಗಳು ಮುಂದೂಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೊರೊನಾ ವೇಗವಾಗಿ ಹರಡುತ್ತಿರುವ ಪರಿಣಾಮ ಸರ್ಕಾರ ಶಾಲೆಗಳನ್ನು ತುರ್ತಾಗಿ ತೆರೆಯಬಾರದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಕೊರೊನಾ ಈಗಲೂ ನಿಯಂತ್ರಣಕ್ಕೆ ಬಂದಿಲ್ಲ. ಮಕ್ಕಳ ಪ್ರಾಣ ಪಣಕ್ಕಿಟ್ಟು ಶಿಕ್ಷಣ ಕೊಡಿಸುವ ಅಗತ್ಯ ಇಲ್ಲ. ಆದರೆ, ಶಿಕ್ಷಣವೂ ಮುಖ್ಯ. ಹಾಗಾಗಿ, ಕನಿಷ್ಠ 6 ತಿಂಗಳು ಶಾಲೆಗಳನ್ನು ತೆರೆಯುವುದು ಬೇಡ ಎಂದು ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ಮನವಿ ಮಾಡಿದರು.

ಸಾಂಸ್ಕೃತಿಕ ವೇದಿಕೆ ಆನ್‌ಲೈನ್‌ ಮೂಲಕ ಶೈಕ್ಷಣಿಕ ವಿಚಾರ ಸಂಕಿರಣ ಆಯೋಜಿಸಿತ್ತು. ಮಾನಸಿಕ ತಜ್ಞರಾದ ಡಾ.ಪ್ರೀತಿ ಶಾನ್‌ಭಾಗ್, ಡಾ.ಗಂಗಾಧರ, ಫಾದರ್ ವೀರೇಶ್ ಮೋರಸ್, ಕೋಣಂದೂರು ಗಣೇಶ್ ಮೂರ್ತಿ, ಕಾಚಿನಕಟ್ಟೆ ಅಶೋಕ್ ಕುಮಾರ್, ವಿಜಯಾಶೆಟ್ಟಿ, ಎನ್‌.ಎಸ್.ಕುಮಾರ್, ಕೃಷ್ಣಮೂರ್ತಿ ಹಿಳ್ಳೋಡಿ, ಬಿ.ಪಾಪಯ್ಯ, ಸುಕೇಶ್ ಶೇರೇಗಾರ್, ಕೆ. ಕೌಸ್ತುಭಾ, ಧನ್ಯಶ್ರೀ, ಕಟ್ಟೇಹಕ್ಲು ಅನನ್ಯ, ಕಾಚಿನಕಟ್ಟೆ ಕಲ್ಯಾಣಿ ಚರ್ಚೆಯಲ್ಲಿ ಭಾಗವಹಿಸಿದ್ದರು. 

ಆನ್‌ಲೈನ್‌ ಶಿಕ್ಷಣ ಕೊಠಡಿಯ ಕಲಿಕೆಗೆ ಸಮಾನವಲ್ಲ. ಶೇಕಡಾ 60ರಷ್ಟು ಮಕ್ಕಳನ್ನೂ ತಲುಪುತ್ತಿಲ್ಲ. ಹಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡು‌ವ ಶಿಕ್ಷಕರಿಗೆ ವೇತನ ಇಲ್ಲ. ಸರ್ಕಾರ ಅವರ ನೆರವಿಗೆ ಬರಬೇಕು. ಶಿಕ್ಷಕರ ಬ್ಯಾಂಕ್ ಖಾತೆಗೆ ಹಣನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ ಎಂದರು.

ಸದ್ಯಕ್ಕೆ ಶಾಲೆಗಳು ತೆರೆಯುವುದು ಬೇಡ. ಅಲ್ಲಿಯವರೆಗೂ ಪೂರಕವಾದ ಶಿಕ್ಷಣ ಚಟುವಟಿಕೆ ಮುಂದುವರಿಸಬಹುದು. ಸರ್ಕಾರ ಎಚ್ಚರಿಕೆ ಮಾರ್ಗ ಅನುಸರಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಪದಾಧಿಕಾರಿಗಳಾದ ಭಾರತಿ ರಾಮಕೃಷ್ಣ, ಡಿ.ಗಣೇಶ್, ಎಸ್.ಶಿವಮೂರ್ತಿ, ಯು.ಮಧುಸೂದನ್ ಐತಾಳ್, ಭೈರಾಪುರ ಶಿವಪ್ಪಗೌಡ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.