ಕಾರ್ಗಲ್: ‘ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿ ಬಿತ್ತುವ ಜೊತೆಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಲು ಪೋಷಕರು ಚಿಂತನೆ ನಡೆಸಬೇಕಿದೆ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಸಮೀಪದ ಬಿದರೂರು ಜೈನ ಬಸದಿಯಲ್ಲಿ ನಡೆಯುತ್ತಿರುವ ಪಂಚಕಲ್ಯಾಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

‘ಬಿದರೂರಿನಲ್ಲಿ ಜೈನ ಸಮಾಜದ ವತಿಯಿಂದ ಅಂದಾಜು ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಭವ್ಯ ಶಿಲಾ ಜಿನ ಮಂದಿರಕ್ಕೆ ಸರ್ಕಾರದಿಂದ ₹ 50 ಲಕ್ಷ ಸಹಾಯ ನೀಡಲಾಗಿದೆ. ಜಿನ ಮಂದಿರಕ್ಕೆ ಅಗತ್ಯವಾದ ಮೂಲ ಸೌಲಭ್ಯಗಳಾದ ಕಾಂಕ್ರೀಟ್ ಸಂಪರ್ಕ ರಸ್ತೆ, ಕುಡಿಯುವ ನೀರು, ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಶಾಸಕರ ಅನುದಾನದಿಂದ ವಿಶೇಷ ಧನಸಹಾಯ ನೀಡಲು ಸಂಕಲ್ಪ ಮಾಡಲಾಗಿದೆ’ ಎಂದರು.

‘ಜೈನ ಸಮಾಜ ಅಹಿಂಸೆಯ ಮೂಲ ಮಂತ್ರವನ್ನು ಚಾಚೂ ತಪ್ಪದೆ ಪಾಲಿಸುವುದರಿಂದ, ಸಮಾಜದ ಎಲ್ಲ ವರ್ಗದ ಜನರ ಪ್ರೀತಿ ಗಳಿಸಿದೆ. ಶರಾವತಿ ನದಿ ತೀರದಲ್ಲಿ ಪ್ರಾಚೀನ ಶೈಲಿಯಲ್ಲಿ ನೆಲೆಗೊಂಡಿರುವ ಇಲ್ಲಿನ ಶಿಲಾಮಯ ಜಿನಮಂದಿರ ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸಿ ದೊಡ್ಡ ಪ್ರವಾಸಿ ತಾಣವಾಗುವ ಲಕ್ಷಣ ಕಂಡು ಬರುತ್ತಿದೆ. ಇಲ್ಲಿನ ಆಡಳಿತ ಮಂಡಳಿ ದುರ್ಬಲ ವರ್ಗದವರಿಗೆ ಸಹಾಯ ಮಾಡುವುದರ ಮೂಲಕ ಭಗವಾನ್ ಮಹಾವೀರರ ಮೂಲ ಪರಿಕಲ್ಪನೆಯಾದ ಸಾಮಾಜಿಕ ಸಮಾನತೆ ಮೂಡಿಸುವ ನಿಟ್ಟಿನಲ್ಲಿ ಹೆಜ್ಜೆಯನ್ನಿರಿಸಬೇಕು’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಬೆಳಗಾವಿಯ ಮಾಜಿ ಶಾಸಕ ಸಂಜಯ್ ಪಾಟೀಲ್, ‘ಜೈನ ಬಸದಿ, ಮಠಗಳು ಸಮಾಜಮುಖಿಯಾಗಿ ನೊಂದವರ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಲ್ಲಿ ಮೊದಲ ಸ್ಥಾನದಲ್ಲಿವೆ. ಜೈನ ಧರ್ಮೀಯರಲ್ಲಿ ಸಮಾನತೆಯ ದೃಷ್ಟಿಕೋನ ಬೆಳೆಸುವಲ್ಲಿ ಜೈನ ಸಮಾಜದ ಋಷಿ ಮುನಿಗಳ ಪಾತ್ರ ಪ್ರಮುಖವಾಗಿದೆ’ ಎಂದು ಹೇಳಿದರು.

ಜಿನ ಮಂದಿರಕ್ಕೆ ಮಾನಸ್ಥಂಭೋಪರಿ ಏಕ ಶಿಲಾ ಸ್ಥಂಭವನ್ನು ನೀಡಿದ ಬೆಳಗಾವಿಯ ಗೊಮಟೇಶ ವಿದ್ಯಾಪೀಠದ ನಿರ್ದೇಶಕ ಸನತ್ ಕುಮಾರ್ ಪಟೇಲ್ ಅವರನ್ನು ಸನ್ಮಾನಿಸಲಾಯಿತು.

ಜೈನ ಸಮಾಜದ ಸಂತ ಶಿರೋಮಣಿ ಆಚಾರ್ಯ 108 ಪುಣ್ಯಸಾಗರ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಸೋಂದಾದ ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಜೈನ ಸಮಾಜ ಸಾಗರ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ.ಲೋಕರಾಜ ಜೈನ್, ಪ್ರತಿಷ್ಠಾಚಾರ್ಯ ಮೋಹನ್ ಕುಮಾರ್ ಇಂದ್ರ, ಅಂಬೇಡ್ಕರ್ ನಿಗಮದ ರಾಘವೇಂದ್ರ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸವಿತಾ ನವೀನ್ ಜೈನ್, ಪ್ರದೀಪ, ಜ್ಯೋತಿ ಜೈನ್, ರವಿ, ಚೂಡಾರತ್ನ ಜೈನ್, ಲೋಕರಾಜ ಜೈನ್ ಮುಂತಾದವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-42-1656022004

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.