ಕಾರ್ಗಲ್: ಇಲ್ಲಿಗೆ ಸಮೀಪದ ಜೋಗದ ಯೂತ್ ಹಾಸ್ಟೆಲ್ ಬಳಿ ಮನೆ ಬೀಗ ಮುರಿದು ಕಳ್ಳತನ ಮಾಡಲಾಗಿದೆ.

ವಿ.ಕೆ. ಉಮ್ಮರ್ ಮತ್ತು ಕುಟುಂಬ ಪ್ರವಾಸಕ್ಕೆಂದು ಏ. 21ರಂದು ಗೋವಾಕ್ಕೆ ತೆರಳಿದ್ದರು. ಅದಕ್ಕೂ ಮುನ್ನ ಜೋಗದ ಬಜಾರ್ ಲೈನ್ನಲ್ಲಿರುವ ತಮ್ಮ ಅಂಗಡಿ ಮುಂದೆ 4 ದಿನ ರಜಾ ಇರುತ್ತದೆ ಎಂಬ ದೊಡ್ಡ ಫಲಕ ಹಾಕಿದ್ದರು. ಏ. 26ರಂದು ಪ್ರವಾಸ ಮುಗಿಸಿ ಬಂದಾಗ ಮನೆಯ ಮುಂಬಾಗಿಲಿನ ಬೀಗ ಒಡೆದು ಕಳ್ಳತನ ಮಾಡಿರುವುದು ಗೊತ್ತಾಗಿದೆ.

ಕಳ್ಳರು ಅಲ್ಮೇರಾದ ಬಾಗಿಲು ಮುರಿದು 22 ಗ್ರಾಂ ಬಂಗಾರದ ಚೈನ್ ಹಾಗೂ 90 ಸಾವಿರ ನಗದು ಕಳ್ಳತನ ಮಾಡಿದ್ದಾರೆಂದು ದೂರಿದ್ದಾರೆ.

ಪಿಎಸ್ಐ ನಾಗರಾಜ್ ಅವರು ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡವನ್ನು ಪರಿಶೀಲಿಸಿದ್ದಾರೆ. ಅಂಗಡಿ ಮುಂದೆ ರಜೆಯ ಬೋರ್ಡ್ ಹಾಕಿದ್ದೇ ಕಳ್ಳತನಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-42-949077766

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.