ಸೋಮವಾರ, ಡಿಸೆಂಬರ್ 5, 2022
21 °C

ಕಾರಿಪುರ: ಕಾರಿನ ಗ್ಲಾಸ್ ಒಡೆದು ₹5 ಲಕ್ಷ ಕಳ್ಳತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿಪುರ: ಕಾರಿನ ಗ್ಲಾಸ್ ಒಡೆದ ಕಳ್ಳರು  ಸೀಟಿನ ಮೇಲೆ ಇಟ್ಟಿದ್ದ ₹5 ಲಕ್ಷ ಕಳ್ಳತನ ಮಾಡಿದ್ದಾರೆ. ಪಟ್ಟಣದ ಡಿಸಿಸಿ ಬ್ಯಾಂಕ್ ಮುಂಭಾಗ ಶನಿವಾರ ಈ ಕೃತ್ಯ ನಡೆದಿದೆ. 

ಕಪ್ಪನಹಳ್ಳಿ ಗ್ರಾಮದ ನಿವಾಸಿ ಕೇಶವ್  ಎಸ್ ಬಿಐ ಬ್ಯಾಂಕಿನಿಂದ ₹5 ಲಕ್ಷ ಬಿಡಿಸಿಕೊಂಡು ಬಂದಿದ್ದರು. 

ಈ ಹಣ ಇದ್ದ ಕವರ್ ತಮ್ಮ ಕಾರಿನ ಸೀಟಿನ ಮೇಲೆ ಇಟ್ಟು ಡಿಸಿಸಿ ಬ್ಯಾಂಕ್ ಒಳಗೆ ವ್ಯವಹಾರ ನಡೆಸಲು ಹೋದ ಸಂದರ್ಭದಲ್ಲಿ ಕಳ್ಳರು ಕಾರಿನ ಗ್ಲಾಸ್ ಒಡೆದು ಹಣ ಲಪಟಾಯಿಸಿದ್ದಾರೆ. 

ಸ್ಥಳಕ್ಕೆ ಡಿವೈಎಸ್ ಪಿ ಶಿವಾನಂದ ಮದರಖಂಡಿ, ಸಿಪಿಐ ಲಕ್ಷ್ಮಣ್, ಪಟ್ಟಣ ಪೊಲೀಸ್ ಠಾಣೆ ಪಿಎಸ್ ಐ ಪ್ರಶಾಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳ್ಳತನಕ್ಕೆ ಸಂಬಂಧಿಸಿದಂತೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು  ತನಿಖೆ ಮುಂದುವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು