ಗುರುವಾರ , ಡಿಸೆಂಬರ್ 8, 2022
18 °C
ಶರಾವತಿ ಕಣಿವೆಯಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಣೆ

ಕಾರ್ಗಲ್: ಎಲ್ಲೆಲ್ಲೂ ರಾರಾಜಿಸಿದ ಅಪ್ಪು ಚಿತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಶರಾವತಿ ಕಣಿವೆ ಪ್ರದೇಶದ ಕೇಂದ್ರ ಸ್ಥಾನವಾದ ಕಾರ್ಗಲ್ ಮತ್ತು ಸುತ್ತ ಮುತ್ತಲಿನ ತಾಣಗಳಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಕನ್ನಡ ಸಂಘ: ಕಾರ್ಗಲ್ ಪಟ್ಟಣದ ಕನ್ನಡ ಸಂಘದ ಆವರಣದಲ್ಲಿ ಅಧ್ಯಕ್ಷೆ ಲಕ್ಷ್ಮೀರಾಜು ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪ್ರೌಢಶಾಲೆ, ಕಿರಿಯ ಪ್ರಾಥಮಿಕ ಶಾಲೆ, ಕೆಪಿಸಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮತ್ತು ಭೋದಕ ವೃಂದ ಉಪಸ್ಥಿತರಿದ್ದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್, ಉಪಾಧ್ಯಕ್ಷ ಪಿ. ಮಂಜುನಾಥ್, ಬಿ. ಉಮೇಶ್, ವಿಜಯಕುಮಾರ್ ಕಾಳಯ್ಯ, ಶ್ರೀಲತಾ, ಗೀತಾ ಮುನಿಸ್ವಾಮಿ ಮುಂತಾದವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ವಾಹನ ಚಾಲಕರ ಸಂಘ: ಶರಾವತಿ ಗೂಡ್ಸ್ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಆವರಣದಲ್ಲಿ ಜನಪ್ರಿಯ ವೈದ್ಯ ಪಿ.ಎಂ. ವಿನೋದ್ ಧ್ವಜಾರೋಹಣ ನೆರವೇರಿಸಿದರು.

ಕೊರೊನಾ ಕಾಲಘಟ್ಟದಲ್ಲಿ ಪ್ರಾಣದ ಹಂಗು ತೊರೆದು ವೈದ್ಯಕೀಯ ಸೇವೆ ನೀಡಿದ ವೈದ್ಯ ವಿನೋದ್ ಅವರ ಸೇವೆ ಪರಿಗಣಿಸಿ  ಸನ್ಮಾನ ಮಾಡಲಾಯಿತು.

ನಾಡದೇವತೆ ಭುವನೇಶ್ವರಿಯ ಚಿತ್ರದೊಂದಿಗೆ ಅಪ್ಪುವಿನ ಚಿತ್ರವನ್ನು ರಸ್ತೆಯುದ್ದಕ್ಕೂ ಅಳವಡಿಸಿದ್ದರು. ಅಧ್ಯಕ್ಷ ಗುರುಮೂರ್ತಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಆರೋಡಿ, ಜಾನ್, ಜೈಸನ್, ರವಿ ಮುಂತಾದವರು ಆಚರಣೆಯ ಮೇಲ್ವಿಚಾರಣೆಯನ್ನು ಹೊತ್ತಿದ್ದರು.

ಆಟೊ ಚಾಲಕರ ಸಂಘ: ಆಟೊ ಚಾಲಕರ ಸಂಘದ ಆವರಣದಲ್ಲಿ ಅಧ್ಯಕ್ಷ ಮನೋಜ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.

ವಿಶೇಷ ಜಾಂಜ್ ಮೇಳದೊಂದಿಗೆ ಆಟೊಗಳು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದವು. ಆಟೊದ ಮೇಲ್ಭಾಗದಲ್ಲಿ ನಾಡದೇವಿಯ ಚಿತ್ರದೊಂದಿಗೆ ಪುನೀತ್ ಚಿತ್ರವನ್ನು ಅಲಂಕರಿಸಿದ್ದರು.

ಶರಾವತಿ ವರ್ತಕರ ಸಂಘದ ಪರವಾಗಿ ಉಪಾಧ್ಯಕ್ಷ ಪಾರ್ಶ್ವನಾಥ ಜೈನ್ ಧ್ವಜಾರೋಹಣ ನೆರವೇರಿಸಿದರು. ಗೌರವಾಧ್ಯಕ್ಷ ಮೋಹನ್ ಎಂ ಪೈ, ಅಧ್ಯಕ್ಷ ಟಿ. ಸುರೇಶ್ ಉಪಸ್ಥಿತರಿದ್ದರು.

ಮಂದಾರ ಕಂಫರ್ಟ್ ಟವರ್ ಆವರಣದಲ್ಲಿ ನವ ಕನ್ನಡಿಗರ ಬಳಗದ ವತಿಯಿಂದ ಬೃಹತ್ ನಾಡ
ಧ್ವಜಾರೋಹಣವನ್ನು ಮಂದಾರ ಟವರ್ ತುದಿಯಲ್ಲಿ ಹಾರಿಸಲಾಯಿತು.

40 ಅಡಿ ಎತ್ತರದ ಪುನೀತ್ ಭಾವಚಿತ್ರದ ಫ್ಲೆಕ್ಸ್ ಅನ್ನು ಅಳವಡಿಸಿ ರಾಜ್ಯೋತ್ಸವಕ್ಕೆ ಮೆರುಗನ್ನು ನೀಡಲಾಯಿತು. ಶರಾವತಿ ವಾಹನ ಚಾಲಕರ ಸಂಘದ ಆವರಣದಲ್ಲಿ ಅಧ್ಯಕ್ಷ ಟಿ. ಸುರೇಶ್ ಧ್ವಜಾರೋಹಣ ನೆರವೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು