ಶಿಕಾರಿಪುರ: 12ನೇ ಶತಮಾನದ ಬಸವಣ್ಣನವರ ಸಾರಥ್ಯದಲ್ಲಿ ನಡೆದ ಸಮಾಜೋ-ಧಾರ್ಮಿಕ ಕ್ರಾಂತಿಗೆ ಜ್ಞಾನ, ಭಕ್ತಿ, ವೈರಾಗ್ಯಗಳ ನೆಲೆಯನ್ನು ತೋರಿಸಿದವ ಅಲ್ಲಮ ಎಂದು ಶಿಕಾರಿಪುರ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕೆ.ಎಚ್. ಪುಟ್ಟಪ್ಪ ಹೇಳಿದರು.

ತಾಲ್ಲೂಕಿನ ಅಂಬಾರಗೊಪ್ಪ ಕ್ರಾಸ್ನ ಕುಟ್ರಳ್ಳಿಯಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವ್ಯೋಮಕಾಯ ಅಲ್ಲಮ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ವಚನಗಳ ಮೂಲಕ ವಿಶ್ವಕ್ಕೆ ಅಮೂಲ್ಯವಾದ ಅರಿವನ್ನು ಕೊಟ್ಟಿರುವ ಅಲ್ಲಮನ ದನಿಯಲ್ಲಿ ಮನುಕುಲವನ್ನು ಮೇಲೆತ್ತುವ ಬಲವಾದ ಬಯಕೆ ಇದೆ. ಈ ಕಾರಣದಿಂದಲೇ ಅವನು ವಿಶ್ವದ ಅನುಭಾವಿಗಳ ಸಾಲಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾನೆ.

ಮಾಯೆಯ ಬಗ್ಗೆ ಅಲ್ಲಮ ಹೇಳಿರುವ ಮಾತುಗಳು ಅತ್ಯಂತ ಅರ್ಥಪೂರ್ಣವಾಗಿವೆ. ಮನಸ್ಸಿನಲ್ಲಿ ಹುಟ್ಟುವ ಆಸೆಯೇ ಮಾಯೆ ಎಂದಿದ್ದಾನೆ. ಜನಸಾಮಾನ್ಯರ ಅಂದುಕೊಂಡಂತೆ ಹೆಣ್ಣು, ಹೊನ್ನು, ಮಣ್ಣು ಮಾಯೆಯಲ್ಲ. ಇವೆಲ್ಲಕ್ಕೂ ಆಸೆಪಡುವ ಮನಸ್ಸಿನ ಮುಂದಿರುವ ಆಸೆಯೇ ಮಾಯೆ ಎಂದು ನಿರ್ವಚಿಸಿದ್ದಾರೆ. ಅಲ್ಲಮನ ವಚನಗಳು ಜ್ಞಾನಮಾರ್ಗದ ಬೆಳಕು ನೀಡುತ್ತವೆ ಎಂದರು.

ಮಾಜಿ ಪ್ರಧಾನ ಶೇಖರಪ್ಪ ಅಂಬಾರಗೊಪ್ಪ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ, ರಾಜಕೀಯದಲ್ಲಿದ್ದಾಗ ಸಾಕಷ್ಟು ಸಾರ್ವಜನಿಕ ಕೆಲಸಗಳನ್ನು ಮಾಡಲು ಅವಕಾಶವಿದ್ದು ಸಾಧ್ಯವಾದಷ್ಟು ಒಳ್ಳೆಯ ಕೆಲಸ ಮಾಡಬೇಕೆಂದರು.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಎಸ್. ಭರಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ. ಶಶಿಧರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಗೌರವಾಧ್ಯಕ್ಷ ಸುಭಾಷ್ ಚಂದ್ರ ಸ್ಥಾನಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಕಾರ್ಯದರ್ಶಿ ಸೋಮಶೇಖರ್ ಗಟ್ಟಿ ವಚನ ಗಾಯನ ಮಾಡಿದರು. ಕಾರ್ಯದರ್ಶಿ ಶಿವಾನಂದಪ್ಪ, ಕೋಶಾಧ್ಯಕ್ಷ ಎಚ್.ಜಿ ಮೃತ್ಯುಂಜಯ, ರಮಣಿ ಚಂದ್ರಶೇಖರ್, ಮಂಜುನಾಥ ಬೇಗೂರು, ಬಸವಣ್ಣಪ್ಪ ಮಠದ್, ಪ್ರಭಾಕರ್ ಎ. ಪಾಟೀಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.