ಪ್ರಜಾವಾಣಿ ವಾರ್ತೆ

ಶಿವಮೊಗ್ಗ: ಮುಂಗಾರು ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ತಾಂತ್ರಿಕತೆಗಳನ್ನು ಪರಿಚಯಿಸಲು, ನೈಸರ್ಗಿಕ ಮತ್ತು ಸಾವಯವ ಕೃಷಿ ಉತ್ತೇಜಿಸಲು ಕೇಂದ್ರದ ಕೃಷಿ ಮಂತ್ರಾಲಯ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಆರಂಭಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ತಾಲ್ಲೂಕಿನ ಹೊಳಲೂರಿನಲ್ಲಿ ಗುರುವಾರ ಏರ್ಪಡಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಈ ಅಭಿಯಾನದಲ್ಲಿ ಮುಖ್ಯವಾಗಿ ಕೃಷಿಯಲ್ಲಿ ಡ್ರೋಣ್ ಗಳ ಬಳಕೆ, ಬೆಳೆ ವೈವಿಧ್ಯತೆ ಮತ್ತು ಕೃಷಿ ಯಂತ್ರಾಧಾರಿತ ಮಾದರಿಗಳ ಪರಿಚಯ, ರೈತರು ಮತ್ತು ಕೃಷಿ ವಿಜ್ಞಾನಿಗಳ ನೇರ ಭೇಟಿ ಮತ್ತು ಸಮಾಲೋಚನೆಗೆ ಅವಕಾಶ, ರೈತರ ಅವಿಷ್ಕಾರಗಳನ್ನು ಉತ್ತೇಜಿಸಲಾಗುತ್ತಿದೆ.

ಮಣ್ಣು ಆರೋಗ್ಯ ಚೀಟಿಯ ಆಧಾರದ ಮೇಲೆ ಸೂಕ್ತ ಬೆಳೆ ಆಯ್ಕೆ, ಸಮತೋಲನ ರಾಸಾಯನಿಕ ಗೊಬ್ಬರ ಬಳಕೆಗೆ ಉತ್ತೇಜನ, ತಂತ್ರಜ್ಞಾನ ಮತ್ತು ಆಧುನಿಕ ಯಂತ್ರೋಪಕರಣಗಳ ಸಹಯೋಗದೊಂದಿಗೆ ಸ್ಮಾರ್ಟ್ ಕೃಷಿ ಉತ್ತೇಜಿಸಲಾಗುವುದು ಎಂದು ಹೇಳಿದರು.

ಈ ಅಭಿಯಾನದಲ್ಲಿ ಪ್ರಮುಖವಾಗಿ ಸಮಗ್ರ ಕೃಷಿ ಪದ್ಧತಿ, ಜಾನುವಾರು ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಒಳಗೊಂಡಂತೆ ರೈತರಿಗೆ ಹಲವು ರೀತಿಯ ಮಾಹಿತಿ ಒದಗಿಸಲು ಉದ್ದೇಶಿಸಲಾಗಿದೆ. ರೈತರು ಈ ಅವಕಾಶ ಬಳಸಿಕೊಂಡು ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದು ಸಲಹೆ ನೀಡಿದರು.

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್.ಸಿ.ಜಗದೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ಕುಮಾರ್, ಉಪನಿರ್ದೇಶಕಿ ಮಂಜುಳಾ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಮ್ಯಾ, ರೈತರ ಮುಖಂಡ ಬಸವರಾಜಪ್ಪ, ಸಂತೋಷ್, ದೇವರಾಜ್, ಜಗದೀಶ್, ಸುನೀಲ್ ಚಂದ್ರಶೇಖರ್, ಕಿರಣ್, ಶಿವಕುಮಾರ್ ಉಪಸ್ಥಿತರಿದ್ದರು.

Cut-off box - ವಿಜ್ಞಾನಿಗಳ ನಡೆ ರೈತರ ಕಡೆ.. ಈ ಅಭಿಯಾನದಡಿ ಮೇ 29ರಿಂದ ಜೂನ್ 12ರವರೆಗೆ ದೇಶದ ಸುಮಾರು 1.50ಕೋಟಿ ರೈತರೊಂದಿಗೆ ನೇರ ಸಂವಾದ ನಡೆಯಲಿದೆ. ದೇಶದ 700 ಜಿಲ್ಲೆಗಳಲ್ಲಿ 2000ಕ್ಕೂ ಹೆಚ್ಚಿನ ವಿಜ್ಞಾನಿಗಳ ತಂಡಗಳು ಭಾಗವಹಿಸಿ ಹೊಸ ತಂತ್ರಜ್ಞಾನ ಮತ್ತು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ರೈತರ ಪ್ರತಿಕ್ರಿಯೆ ಮತ್ತು ಅವಿಷ್ಕಾರಗಳ ದಾಖಲೀಕರಿಸುವ ಕಾರ್ಯ ಮಾಡಲಿದ್ದಾರೆ. ಅಲ್ಲದೇ ಹವಾಮಾನ ಪ್ರತಿರೋಧಕ ಬೆಳೆಯ ಬಗೆಗಳು ಸುಧಾರಿತ ಕೃಷಿ ಮಾದರಿ ಹಾಗೂ ಜ್ಞಾನಾಧಾರಿತ ಪರಿಹಾರಗಳನ್ನು ರೈತರಿಗೆ ಒದಗಿಸುತ್ತಿವೆ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.