ಶನಿವಾರ, ಮೇ 30, 2020
27 °C
ಉದ್ಯೋಗ ಖಾತ್ರಿ ಕೆಲಸ 150 ದಿನಗಳಿಗೆ ಹೆಚ್ಚಳ

ರಾಕ್ಷಸರ ಹತ್ತಿರ ಕೊರೊನಾ ಬರೊಲ್ಲ, ನನಗಂತೂ ಬಂದಿಲ್ಲ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಕ್ಷಸರ ಹತ್ತಿರ ಕೊರೊನಾ ಬರುವುದಿಲ್ಲ. ನನಗಂತೂ ಬಂದಿಲ್ಲ. ನಿಮಗೆ ಬಂದಿದೆಯೇ ಎಂದು ಈಶ್ವರಪ್ಪ ಪತ್ರಕರ್ತರನ್ನೇ ಪ್ರಶ್ನಿಸಿದರು. ಕೊರೊನಾ ಬರುತ್ತದೆ ಎಂದು ಹೆಣದ ರೀತಿ ಮನೆಯಲ್ಲೇ ಇರಲು ಸಾಧ್ಯವೇ? ಪರಿಸ್ಥಿತಿ ಎದುರಿಸಲು ಆತ್ಮಸ್ಥೈರ್ಯಬೇಕು. ಜತೆಗೆ, ಜಾಗ್ರತೆಯೂ ಇರಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿವಿಮಾತು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದುವರೆಗೂ ನೀಡುತ್ತಿದ್ದ ವಾರ್ಷಿಕ 100 ದಿನಗಳ ಕೆಲಸವನ್ನು 150ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಮೋದಿ ಅವರು ನರೇಗಾ ಯೊಜನೆ ಮತ್ತಷ್ಟು ಬಲಪಡಿಸಲು ಸೂಚಿಸಿದ್ದಾರೆ. ಬಜೆಟ್‌ನಲ್ಲಿ ₹60 ಸಾವಿರ ಕೋಟಿ ಮೀಸಲಿಟ್ಟಿದ್ದರು. ಪ್ರತಿಯೊಬ್ಬರಿಗೂ 50 ದಿನಗಳು ಹೆಚ್ಚುವರಿ ಕೆಲಸ ನೀಡಲು ನಿರ್ಧರಿಸಿರುವ ಕಾರಣ ಮತ್ತೆ ₹40 ಸಾವಿರ ಕೋಟಿ ಹೆಚ್ಚುವರಿ ಅನುದಾನ ನೀಡುತ್ತಿದ್ದಾರೆ. ಈ ವರ್ಷ ಖಾತ್ರಿ ಕೆಲಸಗಳಿಗೆ ₹1 ಲಕ್ಷ ಕೋಟಿ ಅನುದಾನ ದೊರೆಯಲಿದೆ. ಕೂಲಿ ಹಣವನ್ನೂ ₨ 275ಕ್ಕೆ ಹೆಚ್ಚಿಸಲಾಗಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಖಾತ್ರಿ ಕೆಲಸ ಕೇಳಿಕೊಂಡು ಬರುವ ಎಲ್ಲ ಬಡವರಿಗೂ ತಕ್ಷಣ ಕೆಲಸ ನೀಡಲು ಪಿಡಿಒಗಳಿಗೆ ಸೂಚಿಸಲಾಗಿದೆ. ಕೆಲಸ ನೀಡದೇ ಅಲೆದಾಡಿಸಿದರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಪಿಎಸ್‌ಐ ಕ್ರಮಕ್ಕೆ ಪರೋಕ್ಷ ಸಮರ್ಥನೆ: ಸೋನಿಯಾ ಗಾಂಧಿ ಅವರ ವಿರುದ್ಧ ಸಾಗರ ಪಿಎಸ್‌ಐ ಎಫ್‌ಐಆರ್ ದಾಖಲಿಸಿದ ಕ್ರಮವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡ ಸಚಿವ ಈಶ್ವರಪ್ಪ, ದೇಶದ ಸಂಕಷ್ಟದ ಸಮಯದಲ್ಲಿ ಸರ್ಕಾರದ ಹೋರಾಟಕ್ಕೆ ವಿರೋಧ ಪಕ್ಷಗಳು ಸಾಥ್ ನೀಡಬೇಕು. ಸೋನಿಯಾ ಗಾಂಧಿ ಹಾಗೆ ಮಾಡದೇ ಟೀಕೆ ಮಾಡಿದ್ದಾರೆ. ಅವರ ಹೇಳಿಕೆ ದೇಶದ ಜನರಿಗೆ ನೋವು ತಂದಿದೆ. ದೂರು ನೀಡಿದ ತಕ್ಷಣ ಪ್ರಕರಣ ದಾಖಲಿಸಬೇಕು ಎಂದೇನಿಲ್ಲ. ಪಿಎಸ್‌ಐ ಅವರ ಕರ್ತವ್ಯ ನಿಭಾಯಿಸಿದ್ದಾರೆ. ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು