ಕೂಡಲಿ ಶ್ರೀ ವರ್ಧಂತಿ ಮಹೋತ್ಸವ

ಹೊಳೆಹೊನ್ನೂರು: ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ಕೂಡಲಿ ಶೃಂಗೇರಿ ಮಹಾಸಂಸ್ಥಾನದ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರ 50ನೇ ವರ್ಷದ ವರ್ಧಂತಿ ಅಂಗವಾಗಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ, ‘ಶ್ರೀಮಠ ಹಾಗೂ ಲೋಕ ಕಲ್ಯಾಣಾರ್ಧವಾಗಿ ಮಠದ ಮೂಲ ದೇವರಾದ ಶ್ರೀ ವಿದ್ಯಾಶಂಕರ ಹಾಗೂ ಚಂದ್ರಮೌಳೇಶ್ವರಿಗೆ ರುದ್ರಾಭಿಷೇಕ, ರುದ್ರಹೋಮ, ಚಂಡಿ ಪಾರಾಯಣ, ಚಂಡಿಕಾ ಹವನ ಹಾಗೂ ಯಜ್ಞ ಯಾಗದಿ ಕಾರ್ಯಗಳು ಶ್ರೀಮಠದ ನಿಯಮದಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲಾಗಿದೆ. ಮಠದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ
ಮಾಡಿದರು.
ಪುರೋಹಿತರಾದ ದಾವಣಗೆರೆಯ ಪವನ್ ಕುಮಾರ್, ಶಿವಮೊಗ್ಗದ ಪ್ರಸನ್ನ ಭಟ್, ಹರೀಶ್ ಕಾರಂತ್, ಚಂದ್ರಶೇಖರ ಉಡುಪ, ಮಂಜುನಾಥ್ ಭಟ್, ಶ್ರೀನಿವಾಸ್, ಶ್ರೀಮಠದ ವ್ಯವಸ್ಥಾಪಕ ರಮೇಶ್ ಹುಲಿಮನಿ, ಮಠದ ಮಾಧ್ಯಮ ಪ್ರಮುಖ ವೆಂಕಟಸುಬ್ಬು ಮೋಕ್ಷಗೊಂಡಂ, ಶ್ರೀಮಠದ ಸಿಬ್ಬಂದಿ ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.
ಭಕ್ತರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.