ಸೋಮವಾರ, ಜನವರಿ 17, 2022
20 °C
ಮಹಿಳೆಯ ಜೊತೆ ಸಂಭಾಷಣೆ; ಪ್ರಶ್ನಿಸಲು ಹೋದ ಆಕೆಯ ಪುತ್ರನ ಮೇಲೆ ಹಲ್ಲೆ

ಮಹಿಳೆ ಜತೆ ಸಂಭಾಷಣೆ, ಆಕೆ ಪುತ್ರನ ಮೇಲೆ ಹಲ್ಲೆ: ಶಾಸಕನ ಆಪ್ತ ಕಾರ್ಯದರ್ಶಿ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ಶಾಸಕ ಕುಮಾರ್ ಬಂಗಾರಪ್ಪ ಅವರ ಸರ್ಕಾರಿ ಆಪ್ತ ಸಹಾಯಕ ಉಮೇಶ್ ಗೌಡ ಮಹಿಳೆಯೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಮತ್ತು ಮಹಿಳೆಯ ಪುತ್ರನಿಗೆ ಥಳಿಸಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಪಟ್ಟಣದ ಮಹಿಳೆಯೊಬ್ಬರ ಜೊತೆ ಉಮೇಶ್‌ ಗೌಡ ಗೆಳೆತನ ಸಂಪಾದಿಸಿದ್ದಾರೆ. ಗೆಳೆತನ ಸಲುಗೆಗೆ ತಿರುಗಿದ ಬಳಿಕ ಆ ಮಹಿಳೆಯು ಪತಿಯ ಸಖ್ಯ ತೊರೆದು ಉಮೇಶ್‌ ಗೌಡ ವಾಸವಿದ್ದ ಮನೆ ಇದ್ದ ಕಟ್ಟಡದಲ್ಲೇ ಪ್ರತ್ಯೇಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

‘ತನ್ನ ತಾಯಿಯ ಧ್ವನಿ ಮುದ್ರಿತ ಆಡಿಯೊ ಮೊಬೈಲ್‌ಗಳಲ್ಲಿ ಹರಿದಾಡುತ್ತಿ ರುವುದಕ್ಕೆ ಬೇಸತ್ತ ಮಹಿಳೆಯ ಪುತ್ರನು ತಾಯಿ ವಾಸವಾಗಿದ್ದ ಮನೆಗೆ ತೆರಳಿದ್ದು, ಆ ವೇಳೆ ನೆಲ ಅಂತಸ್ತಿನಲ್ಲಿ ವಾಸವಿದ್ದ ಉಮೇಶ್ ಗೌಡ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಶಾಸಕರ ಆಪ್ತ ಸಹಾಯಕ ಎನ್ನುವ ಕಾರಣಕ್ಕೆ ಪೊಲೀಸರು ವಾಸ್ತವ ಅರಿತು ಪ್ರಕರಣ ದಾಖಲಿಸಿಕೊಳ್ಳದೇ ರಾಜಿ ಮಾಡಿ ಯುವಕನನ್ನು ವಾಪಸ್ ಕಳುಹಿಸಿದ್ದಾರೆ’ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.

ಉಮೇಶ್‌ ಗೌಡ ಕೆಲವೊಮ್ಮೆ ಮಹಿಳೆಯ ಕುಶಲೋಪರಿ ವಿಚಾರಿಸಿರುವುದು, ಕೆಲವೊಮ್ಮೆ ಮನಸ್ತಾಪದಿಂದ ಸಂಭಾಷಣೆ ನಡೆಸಿರುವ ಆಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಯಾರು ಉಮೇಶ ಗೌಡ?

ಸಿದ್ದಾಪುರ ತಾಲ್ಲೂಕಿನವರಾದ ಉಮೇಶ ಗೌಡ ಸೈನ್ಯದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ನಂತರ ಮುಟುಗುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆಯಲ್ಲಿ ಶಾಸಕರ ಸರ್ಕಾರಿ ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು.

‘ಕೆಲವರು ನನ್ನ ಮೇಲಿನ ದ್ವೇಷಕ್ಕೆ ನನ್ನ ರೀತಿಯಲ್ಲಿಯೇ ಧ್ವನಿ ಮುದ್ರಿಸಿ ಆಡಿಯೊ ಹರಿಬಿಟ್ಟಿದ್ದಾರೆ. ಆ ಧ್ವನಿ ನನ್ನದಲ್ಲ’ ಎಂದು ಉಮೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು