ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆಗೆ ಶನಿವಾರ ದಿಢೀರ್ ಭೇಟಿ ನೀಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಾರ್ವಜನಿಕರಿಂದ ದೂರು ದಾಖಲಾಗಿ 22 ದಿನ ಕಳೆದರೂ ಸಮಸ್ಯೆ ಪರಿಹರಿಸದ ಆರೋಗ್ಯ ನಿರೀಕ್ಷಕ ವೇಣುಗೋಪಾಲ್ ಅವರನ್ನು ತಕ್ಷಣ ಸಸ್ಪೆಂಡ್ ಮಾಡುವಂತೆ ಆದೇಶಿಸಿದರು.

ಜಿಲ್ಲಾ ಕುರುಬರ ಸಂಘದ ಸಮುದಾಯ ಭವನದ ಶಂಕುಸ್ಥಾಪನೆಗೆ ಬಂದಿದ್ದ ಬೈರತಿ ಸುರೇಶ್, ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿದರು.

ಸೀದಾ ಪಾಲಿಕೆ ಆವರಣದಲ್ಲಿನ ಸಹಾಯವಾಣಿ ಕೇಂದ್ರಕ್ಕೆ ತೆರಳಿದ ಅವರು, ಅಲ್ಲಿನ ರಿಜಿಸ್ಟರ್ ಪರಿಶೀಲಿಸಿದರು. 22 ದಿನಗಳ ಹಿಂದೆ ದೂರು ನೀಡಿದ್ದ ಸಾರ್ವಜನಿಕರೊಬ್ಬರ ಮೊಬೈಲ್ ಫೋನ್ ನಂಬರ್ ಹುಡುಕಿ ಅವರಿಗೆ ಕರೆ ಮಾಡಿ ‘ನಾನು ಮಿನಿಸ್ಟರ್ ಬೈರತಿ ಸುರೇಶ್ ಮಾಡುತ್ತಿರುವುದು ನಿಮ್ಮ ಸಮಸ್ಯೆ ಪರಿಹಾರವಾಗಿದೆಯೇʼ ಎಂದು ಪ್ರಶ್ನಿಸಿದರು.

‘ಪಾಲಿಕೆ ವ್ಯಾಪ್ತಿಯ ಸೋಮಿನಕೊಪ್ಪ ಆದರ್ಶ ನಗರದ ತಮ್ಮ ಮನೆಯ ಬಳಿ ಚರಂಡಿ ಕಟ್ಟಿಕೊಂಡಿದೆ. ದೂರು ನೀಡಿ ಇಷ್ಡು ದಿನ ಕಳೆದರೂ ಕ್ರಮ ಕೈಗೊಂಡಿಲ್ಲʼ ಎಂದು ದೂರುದಾರ ಈ ವೇಳೆ ಅಲವತ್ತುಕೊಂಡರು.

ಇದರಿಂದ ಆಕ್ರೋಶಗೊಂಡ ಬೈರತಿ ಸುರೇಶ್, ಸ್ಥಳಕ್ಕೆ ಆರೋಗ್ಯ ನಿರೀಕ್ಷಕ ವೇಣುಗೋಪಾಲ್ ಅವರನ್ನು ಕರೆಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇವರು (ವೇಣುಗೋಪಾಲ್) ಸಾರ್ವಜನಿಕರ ದೂರಿಗೆ ಸ್ಪಂದಿಸದೇ ಕರ್ತವ್ಯ ಲೋಪ ಎಸಗಿದ್ದಾರೆ. ಅವರನ್ನು ತಕ್ಷಣ ಸಸ್ಪೆಂಡ್ ಮಾಡಿ ಆದೇಶ ಪ್ರತಿಯನ್ನು ನನಗೆ ವಾಟ್ಸಪ್ ಮಾಡಿ ಎಂದು ಅಲ್ಲಿಯೇ ಇದ್ದ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ ಅವರಿಗೆ ಸೂಚಿಸಿದರು.

ಪಾಲಿಕೆಯ ದೈನಂದಿನ ಆಡಳಿತದಲ್ಲಿ ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರೆದರೆ ಮತ್ತಷ್ಟು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.