ತೀರ್ಥಹಳ್ಳಿ: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯೊಬ್ಬರ ಕೈಕಾಲು ಕಟ್ಟಿ ಮನೆಯೊಳಗಿನ ಚಿನ್ನಾಭರಣ, ನಗದು ದೋಚಿದ ಪ್ರಕರಣ ತಾಲ್ಲೂಕಿನ ಲಕ್ಕುಂದ ಗ್ರಾಮದ ಹುಂಚಿಯಲ್ಲಿ ಮಂಗಳವಾರ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 169 ‘ಎ’ ಮಾರ್ಗದ ಸಮೀಪದ ಮನೆಯಲ್ಲಿ ಏಪ್ರಿಲ್ 21ರಂದು ಮಧ್ಯಾಹ್ನ, ‘ನಿಮ್ಮ ಸಂಬಂಧಿಕರು ಮನೆಗೆ ಬಣ್ಣ ಬಳಿಯಲು ಕಳಿಸಿದ್ದಾರೆ’ ಎಂದು ಮನೆಯಲ್ಲಿದ್ದ ವಿಶಾಲಾಕ್ಷಮ್ಮ (74) ಅವರಿಗೆ ತಿಳಿಸಿದ್ದಾರೆ. ಅನುಮಾನಗೊಂಡ ವೃದ್ಧೆ ಮನೆಯ ಕಿಟಕಿಯಿಂದಲೇ ಮಾತನಾಡಿ, ‘ಬಣ್ಣದ ಕೆಲಸ ಮಾಡುವುದು ಬೇಡ. ಸಂಬಂಧಿಕರ ಜೊತೆ ಮಾತನಾಡುತ್ತೇನೆ’ ಎಂದು ಉತ್ತರಿಸಿದ್ದಾರೆ. ತಕ್ಷಣ ಜಾಗೃತಗೊಂಡ ದರೋಡೆಕೋರರು ಕುಡಿಯಲು ನೀರು ಕೇಳಿದ್ದಾರೆ. ಹೊರಗೆ ನಲ್ಲಿಯಲ್ಲಿ ನೀರು ಬರುತ್ತದೆ ಎಂದು ವೃದ್ಧೆ ಉತ್ತರಿಸಿದ್ದಾರೆ.

ದರೋಡೆಕೋರರು ನೀರು ಕುಡಿದು ಸ್ಪಲ್ಪ ಹೊತ್ತು ಅಲ್ಲಿಯೇ ಇದ್ದು ಸಂಚು ರೂಪಿಸಿದ್ದಾರೆ. ಬಂದವರು ವಾಪಾಸ್ ಹೋಗಿರಬಹುದೇ ಎಂದು ನೋಡಲು ವಿಶಾಲಾಕ್ಷಮ್ಮ ಅವರು ಸ್ವಲ್ಪ ಹೊತ್ತಿನ ನಂತರ ಹಿಂಬಾಗಿಲು ತೆಗೆದು ಹೊರಬಂದಾಗ ದರೋಡೆಕೋರರು ವೃದ್ಧೆಯ ಬಾಯಿ ಮುಚ್ಚಿ ಅವರು ಉಟ್ಟಿದ್ದ ಸೀರೆಯಿಂದಲೇ ಕಾಲು ಕಟ್ಟಿ, ಕೂಡಿ ಹಾಕಿದ್ದಾರೆ. ಮತ್ತೊಂದು ಸೀರೆಯಿಂದ ಕೈಕಟ್ಟಿ ಮೈಮೇಲಿದ್ದ ಚಿನ್ನಾಭರಣ, ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ದರೋಡೆ ಮಾಡಿದ್ದಾರೆ.

ಚಿನ್ನಾಭರಣ ದೋಚಿದ ಬಳಿಕ ದರೋಡೆಕೋರರು ವೃದ್ಧೆಯನ್ನು ಮನೆಯೊಳಗೇ ಇರಿಸಿ ಹೊರಗಿನಿಂದ ಚಿಲಕ ಹಾಕಿ ಪರಾರಿಯಾಗಿದ್ದಾರೆ. ಕೈಕಾಲಿಗೆ ಕಟ್ಟಿದ್ದ ಸೀರೆಯನ್ನು ಕಷ್ಟಪಟ್ಟು ಬಿಚ್ಚಿಕೊಂಡು ಹೊರಬಂದ ವೃದ್ದೆಯು ಸಂಬಂಧಿಕರು, ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಒಂದು ಚಿನ್ನದ ಸರ, ಎರಡು ಚಿನ್ನದ ಬಳೆ, ಕಿವಿಯಲ್ಲಿನ ಚಿನ್ನದ ಓಲೆ ಸೇರಿದಂತೆ ಅಂದಾಜು 146 ಗ್ರಾಂ ಚಿನ್ನಾಭರಣ, 51,000 ನಗದು, ಮೊಬೈಲ್ ಫೋನ್ ಸೇರಿದಂತೆ ಅಂದಾಜು ₹ 17 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಲಾಗಿದೆ.

ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ಪೂರ್ವ ವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ, ಶಿವಮೊಗ್ಗ ಹೆಚ್ಚುವರಿ ಎಸ್ಪಿ ಎ.ಸಿ. ಕಾರ್ಯಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-42-236380543

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.