ಶಿವಮೊಗ್ಗ: ವಿಮಾನ ನಿಲ್ದಾಣದ ಉದ್ಘಾಟನೆಗೆ ಬರುವ ಪ್ರಧಾನಿ ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಿ ಶಾಶ್ವತ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತೀ.ನ. ಶ್ರೀನಿವಾಸ್ ಆಗ್ರಹಿಸಿದರು.

‘ಮಲೆನಾಡಿನಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಪ್ರಮುಖವಾಗಿ ಅಡಿಕೆ ಬೆಳೆಗಾರರ, ಶರಾವತಿ ಮುಳುಗಡೆ ಸಂತ್ರಸ್ತರ, ಬಗರ್ಹುಕುಂ ಸಾಗುವಳಿದಾರರ ಸಮಸ್ಯೆಗಳಿವೆ. ಈ ಹಿಂದೆ ಪ್ರಧಾನಿ ಚುನಾವಣಾ ಭಾಷಣಕ್ಕೆ ಶಿವಮೊಗ್ಗಕ್ಕೆ ಬಂದಾಗ ಅಡಿಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ, ಅದು ಇಂದಿಗೂ ಈಡೇರಿಲ್ಲ. ಅಡಿಕೆಯಲ್ಲಿ ಹಾನಿಕಾರಕ ಪದಾರ್ಥ ಇದೆ ಎಂದು ಬಿಜೆಪಿ ಸರ್ಕಾರದ ಪ್ರಮುಖರೇ ಹೇಳುತ್ತಿದ್ದಾರೆ. ಅದನ್ನು ತೆಗೆದುಹಾಕಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಸಿಗರೇಟು ಲಾಬಿಗೆ ಕೇಂದ್ರ ಸರ್ಕಾರ ಮಣಿಯುತ್ತಿದೆ’ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಅಡಿಕೆಗೆ ಮಾನ ಉಳಿಸದ ಆರೋಗ್ಯ ಮಂತ್ರಿ ಸಂಸತ್ನಲ್ಲಿ ಲಿಖಿತ ಉತ್ತರ ನೀಡಿ ಅಡಿಕೆ ಹಾನಿಕಾರಕ ವಸ್ತು ಎಂದು ಘೋಷಿಸಿರುವುದು ಅಡಿಕೆ ಬೆಳೆಗಾರರಿಗೆ ಬಗೆದ ದ್ರೋಹ. ಇತ್ತೀಚೆಗೆ ಜಾರ್ಖಂಡ್ ಸಂಸದರು ಕೂಡ ಅಡಿಕೆ ಹಾನಿಕಾರಕ ವಸ್ತು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರ ಯಾವ ಯೋಚನೆಯನ್ನೂ ಮಾಡದೆ ಅದನ್ನು ಆಹಾರ ಗುಣಮಟ್ಟದ ಪ್ರಾಧಿಕಾರಕ್ಕೆ ಕಳುಹಿಸಿರುವುದು ವಿಷಾದನೀಯ. ಪ್ರಧಾನಿಯವರು ಮತ್ತೆ ಶಿವಮೊಗ್ಗಕ್ಕೆ ಬರಲಿದ್ದಾರೆ. ಈ ಬಾರಿ ಯಾದರೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕು. ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಸುಪ್ರೀಂ ಕೋರ್ಟ್ಗೆ ಅಡಿಕೆ ಹಾನಿಕಾರಕ ವಸ್ತು ಅಲ್ಲ ಎಂದು ಪ್ರಮಾಣ ಪತ್ರ ನೀಡಬೇಕು’ ಎಂದು ಆಗ್ರಹಿಸಿದರು.

‘ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಹಾಗೆಯೇ ಉಳಿದಿದೆ. ಮುಖ್ಯಮಂತ್ರಿ ಬಗೆಹರಿಸುವುದಾಗಿ ಸಂತ್ರಸ್ತರ ಸಭೆ ಕರೆದು ಹೇಳಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಈಶ್ವರಪ್ಪ ಸೇರಿ ಮಲೆನಾಡು ಭಾಗದ ಶಾಸಕರುಗಳೆಲ್ಲ ಮೌನವಾಗಿದ್ದಾರೆ. ಸುಳ್ಳು ಹೇಳುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತೀರ್ಥಹಳ್ಳಿಗೆ ಬಂದಾಗ ಎಲೆ ಅಡಿಕೆ ತಿಂದು ಬೆಳೆಗಾರರ ಜೊತೆ ಸಂವಾದ ಮಾಡಿದ್ದಷ್ಟೇ ನೆನಪು’ ಎಂದು ವ್ಯಂಗ್ಯವಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಕೃಷ್ಣಮೂರ್ತಿ, ತೀರ್ಥನಾಯ್ಕ, ಕುಮಾರ್ ನಾಯ್ಕ, ಸಂಪ್ರೀತ್ ನಾಯ್ಕ, ರವಿನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.