ಮಂಗಳವಾರ, ಜನವರಿ 19, 2021
26 °C

ಶಿವಮೊಗ್ಗ: ಕಾರಿಗೆ ಲಾರಿ ಡಿಕ್ಕಿಯಾಗಿ ಯುವತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸನಗರ: ತಾಲ್ಲೂಕಿನ ಕಾನುಗೋಡು ಸಮೀಪದ ಹೆರೆಟೆ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದು ಯುವತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದಾವಣಗೆರೆ ನಗರದ ಆಂಜನೇಯ ಬಡಾವಣೆಯ ನಿವಾಸಿ ಚಿನ್ಮಯಿ (23) ಮೃತಪಟ್ಟ ಯುವತಿ.

ಕೋಟೇಶ್ವರದಲ್ಲಿ ಕಾರ್ಯಕ್ರಮ ಮುಗಿಸಿ ಶ್ರೀನಿವಾಸ್‌ ಕುಟುಂಬ ದಾವಣಗೆರೆ ಕಡೆ ಸಾಗುತ್ತಿತ್ತು. ಕಾರಿನಲ್ಲಿ ಚಾಲಕ ಶಶಿಧರ್, ಶ್ರೀನಿವಾಸ್ ಹಾಗೂ ಪತ್ನಿ ಬೃಂದಾ, ಮಕ್ಕಳಾದ ಚಿನ್ಮಯಿ, ಲಾಸ್ಯ ಇದ್ದರು.

ಶಿವಮೊಗ್ಗದಿಂದ ಮಂಗಳೂರು ಕಡೆ ಸಾಗುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಪಲ್ಟಿ ಹೊಡೆದು ಕಾರಿಗೆ ಡಿಕ್ಕಿ ಹೊಡೆದಿದೆ. ಚಿನ್ಮಯಿಗೆ ತಲೆಗೆ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕ ಸೇರಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳಕ್ಕೆ ಸಿಪಿಐ ಜಿ.ಕೆ.ಮಧುಸೂದನ್, ಪಿಎಸ್ಐ ಶಿವರಾಜ್, ಪಟ್ಟಣ ಪಂಚಾ
ಯಿತಿ ಮಾಜಿ ಅಧ್ಯಕ್ಷ ಶ್ರೀಪತಿರಾವ್, ಮುರಳಿರಾವ್, ಜೆಸಿಐನ ಚಿತ್ತಾರ ಮುರಳಿ, ವಿಶ್ವೇಶ್ವರ ಭೇಟಿ ನೀಡಿದರು. ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು