ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳಲೀಮಕ್ಕಿ ಸರ್ಕಾರಿ ಪ್ರೌಢಶಾಲೆಗೆ ಎರಡು ವರ್ಷಗಳಿಂದ ಶೇ 100 ಫಲಿತಾಂಶ

Last Updated 12 ಮೇ 2022, 4:52 IST
ಅಕ್ಷರ ಗಾತ್ರ

ಮಳಲೀಮಕ್ಕಿ (ಕೋಣಂದೂರು): ಕಳೆದುಂದಿದ್ದ ಮಳಲೀಮಕ್ಕಿಯ ಸರ್ಕಾರಿ ಪ್ರೌಢಶಾಲೆಯ ಸುಣ್ಣ ಬಣ್ಣ ಅಭಿಯಾನಕ್ಕೆ ದೇಮ್ಲಾಪುರ ಗ್ರಾಮ ಪಂಚಾಯಿತಿ, ಶಾಲೆಯ ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ಹಾಗೂ ಸ್ಥಳೀಯ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ.

ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿಯವರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದ್ದರ ಪರಿಣಾಮವಾಗಿ ದೇಮ್ಲಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮುಖ್ಯ ಶಿಕ್ಷಕರು, ಶಾಲೆಯ ಹಿರಿಯ ವಿದ್ಯಾರ್ಥಿಗಳ ನೆರವಿನಿಂದ 246 ಸದಸ್ಯರಿರುವ ವಾಟ್ಸ್ಆ್ಯಪ್‌ ಗುಂಪು ರಚಿಸಲಾಗಿತ್ತು. ಸದಸ್ಯರೆಲ್ಲರೂ ತಮ್ಮ ಕೈಲಾದ ಧನ ಸಹಾಯ ನೀಡಿದ್ದಾರೆ.

ಇನ್ನೂ ಹಲವರಿಂದ ಹಣ ಸಂಗ್ರಹವಾಗುತ್ತಿದ್ದು, ಪ್ರಥಮ ಆದ್ಯತೆಯಾಗಿ ಶಾಲೆಯ ಶುಚಿತ್ವ ಹಾಗೂ ಬಣ್ಣ ಹಚ್ಚುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.ಹಣ ಸಂಗ್ರಹಣೆಯ ಆಧಾರದಲ್ಲಿ ಇನ್ನುಳಿದ ಶಾಲೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಯೋಜನೆ ಇದೆ.

‘ಈ ಅಭಿಯಾನಕ್ಕೆ ಸ್ಥಳೀಯರು ಹಾಗೂ ಹಿರಿಯ ವಿದ್ಯಾರ್ಥಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಇಂತಹ ಕಾರ್ಯಗಳು ಪ್ರತಿ ಊರಿನಲ್ಲಿಯೂ ನಡೆಯಬೇಕು’ ಎಂದು ದೇಮ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ತಿಳಿಸಿದರು.

‘ಶಾಲೆಯಲ್ಲಿ 97 ವಿದ್ಯಾರ್ಥಿಗಳು ಕಲಿಯುತ್ತಿದ್ದು, 8ರಿಂದ 10 ಕಿ.ಮೀ. ದೂರದ ಊರುಗಳಿಂದ ಬರುತ್ತಾರೆ. ಪ್ರತಿವರ್ಷ ಶೇ 100 ಫಲಿತಾಂಶ ಬರುತ್ತಿದೆ. ಗುಣಮಟ್ಟದ ಶಿಕ್ಷಣದ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿರುವುದು ಶಾಲೆಯ ಹೆಗ್ಗಳಿಕೆ’ ಎನ್ನುತ್ತಾರೆ ಅವರು.

ಕೋಟ್‌...

ಬಣ್ಣ ಬಳಿದ ನಂತರ ಮಿಕ್ಕ ಹಣದಲ್ಲಿ ಕಂಪ್ಯೂಟರ್ ಕೊಠಡಿ, ಬ್ಯಾಟರಿ ದುರಸ್ತಿ ಮಾಡುವ ಯೋಚನೆ ಇದೆ. ನಮ್ಮೂರಿನ ಶಾಲೆಯ ಅಭಿವೃದ್ಧಿಗೆ ನೆರವು ನೀಡಿದ, ನೀಡುತ್ತಿರುವ ಎಲ್ಲರಿಗೂ ಅಭಿನಂದನೆಗಳು.

ಕೆ.ವಿ. ರಮೇಶ್, ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT