ತೀರ್ಥಹಳ್ಳಿ: ಮುಂಡವಳ್ಳಿ, ದಬ್ಬಣಗದ್ದೆ ಕ್ವಾರಿಯಲ್ಲಿ ಮರಳು ತೆಗೆಯಲು ಪರವಾನಗಿ ನೀಡದ ಕಾರಣ ಮಂಡಗದ್ದೆ ವ್ಯಾಪ್ತಿಯಲ್ಲಿ ಮರಳು ಅಕ್ರಮ ಸಾಗಣೆ ದಂಧೆ ಹೆಚ್ಚಳವಾಗಿದೆ. ಪಿಕಪ್ ವಾಹನಗಳಲ್ಲಿ ನಿತ್ಯ ನೂರಾರು ಲೋಡ್ ಮರಳನ್ನು ಸಾಗಿಸಲಾಗುತ್ತಿದೆ.

ಗಾಜನೂರಿನ ತುಂಗಾ ಜಲಾಶಯದ ಹಿನ್ನೀರು ಕಡಿಮೆಯಾಗಿದೆ. ತುಂಗಾ ನದಿಯಲ್ಲೂ ನೀರಿನ ಹರಿವು ಇಳಿಕೆಯಾಗಿರುವ ಕಾರಣಕ್ಕೆ ದಂಧೆಕೋರರು ಮರಳು ಅಕ್ರಮ ಗಣಿಗಾರಿಕೆಗೆ ಮುಂದಾಗಿದ್ದಾರೆ. ಆದರೂ ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್, ಅರಣ್ಯ, ಕಂದಾಯ ಇಲಾಖೆಯ ಸಿಬ್ಬಂದಿಯನ್ನೊಳಗೊಂಡ ಮರಳು ಕಾರ್ಯಪಡೆ ಇದನ್ನು ತಡೆಯುವ ಗೋಜಿಗೆ ಹೋಗಿಲ್ಲ. ಈ ಕುರಿತ ದೂರುಗಳಿಗೂ ಬೆಲೆ ನೀಡುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಅಧಿಕಾರಿಗಳ ‘ಜಾಣ ಕುರುಡು’ ದಂಧೆಕೋರರಿಗೆ ವರದಾನವಾಗಿವೆ. ಅವರು ಮರಳನ್ನು ಅವ್ಯಾಹತವಾಗಿ ಸಾಗಿಸುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ನಿತ್ಯ ಅಂದಾಜು ₹ 25 ಲಕ್ಷಕ್ಕೂ ಅಧಿಕ ಪ್ರಮಾಣದ ವರಮಾನ ನಷ್ಟವಾಗುತ್ತಿದೆ.

ನಂಬಳ, ಮಳಲೂರು, ಬೇಗುವಳ್ಳಿ, ದಬ್ಬಣಗದ್ದೆ, ಬಗ್ಗೊಡಿಗೆ, ಅರೇಹಳ್ಳಿ ಸೇರಿ ವಿವಿಧೆಡೆ 17 ಖಾಸಗಿ ಕ್ವಾರಿಗಳಿವೆ. ಇವುಗಳಿಗೆ ಗುತ್ತಿಗೆ ಸಿಕ್ಕಿದ್ದರೂ ಪರಿಸರ ವಿಮೋಚನಾ ಪ್ರಮಾಣಪತ್ರ ಪಡೆದಿಲ್ಲ. ಹೀಗಾಗಿ ಮರಳು ಗಣಿಗಾರಿಕೆ ನಡೆಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.

ಗಾಜನೂರಿನಲ್ಲಿ ಅರಣ್ಯ ತಪಾಸಣಾ ಕೇಂದ್ರ ಇದ್ದರೂ ಅಡೆತಡೆಯಿಲ್ಲದೇ ಮಂಡಗದ್ದೆ, ಹೊಳೆಕೊಪ್ಪ, ಮಹಿಷಿ, ಶಿರುಪತಿ, ಆರಗ ಭಾಗದ ಮರಳು ಶಿವಮೊಗ್ಗ ಪಟ್ಟಣ ಸೇರುತ್ತಿದೆ. ಆಗುಂಬೆ ಭಾಗದ ಮರಳು ಚಿಕ್ಕಮಗಳೂರು ಜಿಲ್ಲೆಯತ್ತ ಸಾಗಣೆಯಾಗುತ್ತಿದೆ.

ಪರಿಸರ ಸೂಕ್ಷ್ಮ ವಲಯದಲ್ಲೂ ದಂಧೆ: ಕೆ.ಕಸ್ತೂರಿ ರಂಗನ್ ನೇತೃತ್ವದ ಪಶ್ಚಿಮಘಟ್ಟ ಜೀವವೈವಿಧ್ಯ ತಜ್ಞರ ಸಮಿತಿಯು ಶೇ 37ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಗುರುತಿಸಿದೆ. ಈ ವರದಿ ಆಧಾರದಲ್ಲಿ ಅರಣ್ಯ ಇಲಾಖೆಯು 2014ರಲ್ಲಿ ಸರ್ಕಾರ ಗುರುತಿಸಿದ್ದ ಮಹಿಷಿ, ಹೊಳೆಕೊಪ್ಪ ಮರಳು ಕ್ವಾರಿಗೆ ಅನುಮತಿ ನಿರಾಕರಿಸಿತ್ತು. ಹೀಗಿದ್ದರೂ ಈ ಕ್ವಾರಿ ಮತ್ತು ಅವುಗಳಿಗೆ ಹೊಂದಿಕೊಂಡ ಪ್ರದೇಶದಿಂದ ಸಾವಿರಾರು ಲಾರಿ ಲೋಡ್ ಮರಳು ಸಾಗಣೆ ಮಾಡಲಾಗುತ್ತಿದೆ.

ಪಂಚಾಯಿತಿಯಲ್ಲಿ ಮರಳು ಅಲಭ್ಯ: ತೀರ್ಥಹಳ್ಳಿ ತಾಲ್ಲೂಕಿನ ಗ್ರಾಮ ಪಂಚಾಯಿತಿವಾರು 28 ಬ್ಲಾಕ್ಗಳನ್ನು ಗುರುತಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಒಂದು ವರ್ಷದ ಅವಧಿಗೆ ಅನುಮತಿ ನೀಡಿದೆ. ಆದರೆ 12 ಬ್ಲಾಕ್ಗಳಲ್ಲಿನ ಮರಳು ನೀಡಲು ಗ್ರಾಮಾಡಳಿತ ನಿರಾಕರಿಸಿವೆ. ಅರಳಸುರಳಿ ಗ್ರಾಮ ಪಂಚಾಯಿತಿಯಲ್ಲಿ 2, ಆಗುಂಬೆ 2, ಆರಗ 3, ತೂದೂರು 2, ನೆರಟೂರು 2, ಬೆಜ್ಜವಳ್ಳಿ 1, ಬಾಂಡ್ಯ– ಕುಕ್ಕೆ 1, ಮುಳುಬಾಗಿಲು 1, ಹೊದಲ– ಅರಳಾಪುರ 1, ಹೊನ್ನೇತ್ತಾಳು ಗ್ರಾಮದಲ್ಲಿ 1 ಬ್ಲಾಕ್ ಕಾರ್ಯ ನಿರ್ವಹಿಸುತ್ತಿವೆ. ಒತ್ತಡ, ಅಕ್ರಮದ ತಲೆಬಿಸಿಯಿಂದಾಗಿ ಪಿಡಿಒಗಳು ಪರವಾನಗಿ ನೀಡುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-42-879048309

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.