ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಯಲ್ಲಿ ಮೇಳೈಸಲಿದೆ ಸಾಂಸ್ಕೃತಿಕ ಸಂಭ್ರಮ

Last Updated 7 ಫೆಬ್ರುವರಿ 2023, 5:00 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಗೆ ಬರುವ ಜನರಿಗೆ ರಂಜನೆ ಒದಗಿಸುವ ಮತ್ತೊಂದು ವೇದಿಕೆಯಾಗಿದೆ.

ಈ ಬಾರಿ ಗಾಂಧಿ ಮೈದಾನದಲ್ಲಿರುವ ರಂಗಮಂದಿರದಲ್ಲಿ ಮಾರಿಕಾಂಬಾ ಕಲಾ ಮಂಟಪವನ್ನು ನಿರ್ಮಿಸಲಾಗಿದ್ದು, ಅಲ್ಲಿಯೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಗಳ ವಿವರ ಈ ಕೆಳಗಿನಂತಿದೆ.

ಫೆ. 8– ಸಂಜೆ 5.30ಕ್ಕೆ ದೈವಜ್ಞ ಕಲಾ ಬಳಗದಿಂದ ಚಂಡೆ ವಾದನ, ದೈವಜ್ಞ ಮಹಿಳಾ ಸಾಂಸ್ಕೃತಿಕ ಕಲಾ ತಂಡದಿಂದ ಯಕ್ಷ ನೃತ್ಯ. 6ಕ್ಕೆ ಬಿ.ಆರ್.ಅಂಬೇಡ್ಕರ್ ಕೋಲಾಟ ಬಳಗದಿಂದ ಕೋಲಾಟ, 6.30ಕ್ಕೆ ಶಾರದಾಂಬಾ ಸಾಂಸ್ಕೃತಿಕ ಕಲಾ ಕೇಂದ್ರದಿಂದ ಭರತನಾಟ್ಯ, ರಾತ್ರಿ 8ಕ್ಕೆ ಬೆಂಗಳೂರಿನ ಪರಂಪರಾ ಫ್ಯೂಜನ್ ಬ್ಯಾಂಡ್‌ನಿಂದ ವಿವಿಧ ವಾದ್ಯಗಳ ಸಂಗೀತ, 9ಕ್ಕೆ ಫ್ರೆಂಡ್ಸ್ ಮ್ಯೂಸಿಕ್ ತಂಡದಿಂದ ರಸಮಂಜರಿ, 9.30ಕ್ಕೆ ನಾಟ್ಯ ಮಯೂರಿ ನೃತ್ಯ ಕಲಾಕೇಂದ್ರದಿಂದ ಭರತನಾಟ್ಯ, 10ಕ್ಕೆ ಮಾಸ್ಟರ್ ಶಂಕರ್ ಕಲಾ ವೃಂದದಿಂದ ರಸಮಂಜರಿ.

ಫೆ.9– ಸಂಜೆ5.30- ಶಿವಶಕ್ತಿ ಡೊಳ್ಳು ಕಲಾ ತಂಡದಿಂದ ಡೊಳ್ಳು ಕುಣಿತ, 6- ಜೈದೇವ್ ಗುರು ಯೋಗಕೇಂದ್ರದಿಂದ ಯೋಗ ಪ್ರದರ್ಶನ, 6.30 – ಕಾರಣಗಿರಿ ಎನ್.ವಿ.ಲಲಿತ ಅವರಿಂದ ಲಾವಣಿ, ಜಾನಪದ ಗೀತೆ, ದಾಸವಾಣಿ, 7.15- ಅಭಿಷೇಕ್ ರಾವ್ ಸಂಗಡಿಗರಿಂದ ರಸಮಂಜರಿ, 8- ಶಾರದಾ ಸಾಂಸ್ಕೃತಿಕ ವಿದ್ಯಾ ಕೇಂದ್ರದಿಂದ ಸುಗಮ ಸಂಗೀತ, 8-45- ಗೀತಾಂಜಲಿ ಕಲಾ ಕೇಂದ್ರದಿಂದ ಭರತನಾಟ್ಯ, 9-30- ಯೂತ್ ಹಾಸ್ಟೆಲ್ ಅಸೋಸಿಯೇಷನ್ ನಿಂದ ನೃತ್ಯ. 10-ಕುಂದಾಪುರದ ಮಧುರಾ ಮೆಲೋಡಿಸ್ ನಿಂದ ರಸಮಂಜರಿ.

ಫೆ.10 – ಸಂಜೆ 5.30ಕ್ಕೆ ಕೊಡಚಾದ್ರಿ ಚಾರಿಟಬಲ್ ಟ್ರಸ್ಟ್ ನಿಂದ ಮಲ್ಲಗಂಬ ಪ್ರದರ್ಶನ, 6ಕ್ಕೆ ಬೆಂಗಳೂರಿನ ಅಶ್ವಿನ್ ಮೋಹನ್ ಸಂಗಡಿಗರಿಂದ ಸುಗಮ ಸಂಗೀತ, 7ಕ್ಕೆ ಶಿವಮೊಗ್ಗದ ನವಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯಿಂದ ಭರತನಾಟ್ಯ, 7.45ಕ್ಕೆ ಶಿಗ್ಗಾಂವ್‌ನ ನಟರಾಜ ನಾಟ್ಯ ಕಲಾ ಸಂಸ್ಥೆಯಿಂದ ಭರತನಾಟ್ಯ, 8ಕ್ಕೆ ಉಡುಪಿಯ ಸ್ಮಾರ್ಟ್ ಗೈಸ್ ತಂಡದಿಂದ ನೃತ್ಯ. 9.45ಕ್ಕೆ ಸ್ಟಾರ್ ನೈಟ್ ತಂಡದಿಂದ ರಸಮಂಜರಿ.

ಫೆ.11– ಸಂಜೆ 5.30ಕ್ಕೆ ಮಾರಿಕಾಂಬಾ ಸ್ವರ ಚಂಡೆ ಬಳಗದಿಂದ ಚಂಡೆ ವಾದನ, 6ಕ್ಕೆ ಶಿವಮೊಗ್ಗದ ಮಯೂರಿ ನೃತ್ಯ ಕಲಾ ಕೇಂದ್ರದಿಂದ ಭರತನಾಟ್ಯ, 6.45ಕ್ಕೆ ಮಂಗಳೂರಿನ ಕೊಚ್ಚಿಕಾರ್ ದೇವದಾಸ ಪೈ ಅವರಿಂದ ಸಿತಾರ್ ವಾದನ, ರಾತ್ರಿ 7.30ಕ್ಕೆ ಶ್ರೀಧರ ಸಾಗರ್ ಅವರಿಂದ ಸ್ಯಾಕ್ಸೊಪೋನ್ ವಾದನ, 8.15ಕ್ಕೆ ಬೆಂಗಳೂರಿನ ಲಯಾರ್ಣವ ತಂಡದಿಂದ ಫ್ಯೂಜನ್ ಕಾರ್ಯಕ್ರಮ, 9.30ಕ್ಕೆ ಜೀ ಕನ್ನಡ ವಾಹಿನಿ ಗಾಯಕರಿಂದ ರಸಮಂಜರಿ.

ಫೆ.12 ಸಂಜೆ 5.30ಕ್ಕೆ ಹಾಲ್ದೀಪ ಚಂಡೆ ಬಳಗದಿಂದ ಚಂಡೆ ವಾದನ, 6ಕ್ಕೆ ಸ್ನೇಹ ಸಾಗರ ಬಳಗದಿಂದ ಲಂಬಾಣಿ ನೃತ್ಯ, 6.15ಕ್ಕೆ ತೀರ್ಥಹಳ್ಳಿಯ ವಿಭಾ ಪ್ರಕಾಶ್ ಸಂಗಡಿಗರಿಂದ ಸುಗಮ ಸಂಗೀತ, 7ಕ್ಕೆ ಕುಮಾರ್ ಮೈಸೂರು ಅವರಿಂದ ಭರತನಾಟ್ಯ, 7.45ಕ್ಕೆ ಬೆಂಗಳೂರಿನ ಶಶಿಧರ ಕೋಟೆ ಸಂಗಡಿಗರಿಂದ ಸಂಗೀತ ಸಂಭ್ರಮ, 9ಕ್ಕೆ ಮೈಸೂರಿನ ಹರೀಶ್ ಪಂಡಾವ್, ಸಾಗರದ ಶಶಾಂಕ ದೇವಾಡಿಗ ಅವರಿಂದ ದ್ವಂದ್ವ ಸ್ಯಾಕ್ಸೋಪೋನ್ ವಾದನ, 10ಕ್ಕೆ ಪದ್ಮಿನಿ, ಉದಯ ಅಂಕೋಲ ಸಂಗಡಿಗರಿಂದ ರಸಮಂಜರಿ.

ಫೆ.13– ಸಂಜೆ 5.30ಕ್ಕೆ ಕಲಾ ಸಿಂಚನ ಸಾಂಸ್ಕೃತಿಕ ವೇದಿಕೆಯಿಂದ ಜಾನಪದ ಸಮೂಹ ಗಾಯನ, 6ಕ್ಕೆ ಸಾಗರ ಕರಾಟೆ ಇನ್ಸಿಟ್ಯೂಟ್ ನಿಂದ ಕರಾಟೆ ಪ್ರದರ್ಶನ, 6.30ಕ್ಕೆ ಬೆಂಗಳೂರಿನ ಸ್ನೇಹ ನಾರಾಯಣ ಅವರ ಭರತನಾಟ್ಯ, 7.15ಕ್ಕೆ ಕೀರ್ತನಾ ಸುಧೀಂದ್ರ ಕಾರ್ಕಳ ಅವರಿಂದ ಸ್ಯಾಕ್ಸೋಪೋನ್ ವಾದನ, 8.15ಕ್ಕೆ ಡಾ.ಅಪ್ಪಗೆರೆ ತಿಮ್ಮರಾಜು ಸಂಗಡಿಗರಿಂದ ಜಾನಪದ ಗೀತೆ, 9.45ಕ್ಕೆ ಮೈಸೂರಿನ ಸುಮಂತ್ ವಸಿಷ್ಟ ದಿವ್ಯ ರಾಮಚಂದ್ರ ಅವರಿಂದ ರಸಮಂಜರಿ.

ಫೆ.14– ಸಂಜೆ 5.30ಕ್ಕೆ ಮೆಸ್ಕಾಂ ಮಹಿಳಾ ತಂಡದಿಂದ ನೃತ್ಯ ಪ್ರದರ್ಶನ, 6ಕ್ಕೆ ಚಿಟಗೇರಿಯ ಶಿವಕುಮಾರ್ ಅವರಿಂದ ಶಹನಾಯ್ ವಾದನ, 7ಕ್ಕೆ ನಾಟ್ಯತರಂಗ ಟ್ರಸ್ಟ್ ನಿಂದ ಭರತನಾಟ್ಯ, 7.45ಕ್ಕೆ ಬೆಂಗಳೂರಿನ ಸುಧಾಕರ, ದತ್ತಾಶ್ರೀ ಸಾಂಸ್ಕೃತಿಕ ವೇದಿಕೆಯಿಂದ ಸುಗಮ ಸಂಗೀತ, 9ಕ್ಕೆ ಬಸವರಾಜು ಬಳ್ಳಾರಿ ಅವರಿಂದ ಕೂಚುಪುಡಿ
ನೃತ್ಯ, 9.30ಕ್ಕೆ ಸುಹಾನಾ ಸೈಯದ್, ಭರತ್ ಜಿ.ಕೆ. ಸಂಗಡಿಗರಿಂದ ರಸಮಂಜರಿ, ಮಹಾಲಕ್ಷ್ಮಿ ಅವರಿಂದ ನೃತ್ಯ.

ಫೆ.15– ಸಂಜೆ 5.30ಕ್ಕೆ ಸೃಷ್ಟಿ ಕಲಾ ಬಳಗದಿಂದ ಕೋಲಾಟ, 6ಕ್ಕೆ ರವಿವರ್ಮ ಆರ್ಟ್ಸ್ ನಿಂದ ಸ್ಪೀಡ್ ಪೈಯಿಂಟಿಂಗ್, 6.30ಕ್ಕೆ ಜೇನುಗೋಡು ತಂಡದಿಂದ ರಸಮಂಜರಿ, 8.45ಕ್ಕೆ ಸುರೇಖಾ ಹೆಗಡೆ ಸಂಗಡಿಗರಿಂದ ರಸಮಂಜರಿ, 1.30ಕ್ಕೆ ವಂಶವಾಹಿನಿ ಯಕ್ಷ ಮೇಳ ಗುಂಡೂಮನೆ ತಂಡದಿಂದ ಯಕ್ಷಗಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT