ಭದ್ರಾವತಿ: ಮನುಕುಲದ ಕಲ್ಯಾಣಕ್ಕಾಗಿ ಯೇಸು ಕ್ರಿಸ್ತರು ಮಾಡಿದ ತ್ಯಾಗವನ್ನು ಸ್ಮರಿಸುವ ಶಿಲುಬೆ ಬೆಟ್ಟದ ಮಹೋತ್ಸವವನ್ನು ಸಮೀಪದ ಮಾವಿನಕೆರೆ ಗ್ರಾಮದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಹೋತ್ಸವದ ಅಂಗವಾಗಿ ಯೇಸು ಕ್ರಿಸ್ತರನ್ನು ಶಿಲುಬೆಗೇರಿಸುವ ಘಟನೆಗೆ ಸಂಬಂಧಿಸಿದ ‘ಜೀವಂತ ಶಿಲುಬೆ ಹಾದಿ’ ಎಂಬ ರೂಪಕವನ್ನು ಪ್ರಸ್ತುತಪಡಿಸಲಾಯಿತು. ಯೇಸು ಕ್ರಿಸ್ತರು ಪ್ರತಿಪಾದಿಸಿದ ಕ್ಷಮೆ, ಸಹಿಷ್ಣತೆ, ತ್ಯಾಗ ಮೊದಲಾದ ಮೌಲ್ಯಗಳ ಸಂದೇಶ ಸಾರುವ ಫ್ಲೆಕ್ಸ್ಗಳನ್ನು ರಸ್ತೆಯಲ್ಲಿ ಅಳವಡಿಸಲಾಗಿತ್ತು.

ಕಬಳೆ ಧರ್ಮ ಕೇಂದ್ರದ ಧರ್ಮ ಗುರುಗಳಾದ ಫಾದರ್ ರೋಮನ್ ಪಿಂಟೋ ಧಾರ್ಮಿಕ ವಿಧಿಗಳನ್ನು ನಡೆಸಿದರು. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಅಂತ್ಯ ಹಾಗೂ ಜಗತ್ತಿನಾದ್ಯಂತ ಅಂಚಿಗೆ ತಳ್ಳಲ್ಪಟ್ಟವರ ಏಳಿಗೆಗಾಗಿ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು.

ಪಾದಯಾತ್ರೆ ಮೂಲಕ ಗಾಂಧಿನಗರದ ವೆಲಂಕಣಿ ಮಾತೆ ಧರ್ಮಕೇಂದ್ರ ಮತ್ತು ಕಾರೇಹಳ್ಳಿ ಧರ್ಮಕೇಂದ್ರದಿಂದ ಮಾವಿನಕೆರೆ ಶಿಲುಬೆ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ರೂಪಕದ ಪಾತ್ರಧಾರಿಗಳನ್ನು ಸನ್ಮಾನಿಸಲಾಯಿತು.

ಮಾವಿನಕೆರೆಯ ಸಂತ ಕಿರಿಯ ಪುಷ್ಪ ತೆರೇಸಾ ಧರ್ಮಕೇಂದ್ರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವೆಲಂಕಣಿ ಮಾತೆ ಧರ್ಮಕೇಂದ್ರದ ಫಾದರ್ ಸ್ಟೀವನ್ ಡೇಸಾ, ಕಿರಿಯ ಪುಷ್ಪ ಸಂತ ತೆರೇಸಾ ಧರ್ಮಕೇಂದ್ರದ ಫಾದರ್ ಪೌಲ್ ಕ್ರಾಸ್ತಾ, ಅಮಲೋದ್ಭವಿ ಮಾತೆ ಚರ್ಚ್ನ ಫಾದರ್ ಲ್ಯಾನ್ಸಿ ಡಿಸೋಜಾ, ಕಾರೇಹಳ್ಳಿ ಧರ್ಮಕೇಂದ್ರದ ಫಾದರ್ ಸಂತೋಷ್ ಅಲ್ಮೇಡಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-42-1571308760

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.