ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಿಂದ ಒಡೆದ ಜನರ ಮನಸ್ಸು: ರಂಭಾಪುರಿಶ್ರೀ

Last Updated 4 ಮೇ 2022, 3:06 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ರಾಜಕೀಯ ನುಸುಳಿ, ಎಲ್ಲರ ಮನಸ್ಸು ಒಡೆದು ಹೋಗಿದೆ. ಸ್ವಧರ್ಮದಲ್ಲಿ ಶ್ರದ್ಧೆ ಇರಬೇಕು ಹಾಗೂ ಬೇರೆ ಧರ್ಮದ ಬಗ್ಗೆ ಸಹಿಷ್ಣು ಮನೋಭಾವ ಬೆಳಿಸಿಕೊಳ್ಳಬೇಕು ಎಂದು ರಂಭಾಪುರಿಯ ವೀರಸಿಂಹಾಸನಾದೀಶ್ವರ ಪ್ರಸನ್ನ ರೇಣುಕಾ ವೀರಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಮೀಪದ ಹೊಳೆಬೈರನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿಯ ನೂತನ ದೇವಾಲಯದ ಪ್ರವೇಶ ಹಾಗೂ ಗೋಪುರ ಉದ್ಘಾಟನಾ, ಕಳಸಾರೋಹಣ, ಇಷ್ಟಲಿಂಗ ಪೂಜೆ, ಕುಂಭಾಭೀಷೇಕ ರುದ್ರಾಭಿಷೇಕ, ಕೆಂಡಾರ್ಚಾನೆ ಹಾಗೂ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ಅಕ್ಷಯ ತೃತೀಯ ಶುಭ ದಿನ. ಗ್ರಾಮದಲ್ಲಿ ಸೌರ್ಹಾದದಿಂದ ಜೀವನ ಕಟ್ಟಿಕೊಳ್ಳಬೇಕು. ಹಳ್ಳಿಗಳಲ್ಲಿ ಸುಂದರ ದೇವಸ್ಥಾನಗಳು ಕಶಲವಿದ್ದಂತೆ. ಧರ್ಮದ ಆಚರಣೆಗಳು ಬೇರೆಯಾದರೂ ಎಲ್ಲವುಗಳ ಗುರಿ ಮಾನವ ಕಲ್ಯಾಣ ಎಂದರು.

ನುಡಿದ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮಾನವನ ಜೀವನ ಪಾವನವಾಗುತ್ತದೆ. ದೇವರ ಮುಂದೆ ನಿಂತಾಗ ನಾಸ್ತಿಕನ ಮನಸ್ಸಿನಲ್ಲೂ ಸಂತೃಪ್ತಿ ಭಾವ ಮೂಡುತ್ತದೆ ಎಂದರು.

ಧಾರ್ಮಿಕ ಸಂಸ್ಕಾರದ ಆಚರಣೆಯ ಕೊರತೆಯಿಂದ ತೃಪ್ತಿಕರ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಂಡು, ತಂದೆ ತಾಯಿಗಳನ್ನು ವೃದ್ಧಾಪ್ಯದಲ್ಲಿ ಕೈ ಬಿಡಬಾರದು. ಮಕ್ಕಳು ಕೆಟ್ಟವರಾಗಬಹುದು. ಆದರೆ ಮಕ್ಕಳ ಹಿತ ಬಯಸದ ತಾಯಿ ಇರುವುದಿಲ್ಲ ಎಂದು ಹೇಳಿದರು. ಚನ್ನಗಿರಿ ಹಿರೇಮಠದ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಹಾರ್ನಳ್ಳಿ ರಾಮಲಿಂಗೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಡೇನಂದಿಹಳ್ಳಿ ದುಗ್ಲಿಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಎಚ್. ಷಡಾಕ್ಷರಿ, ಕಾಂಗ್ರೆಸ್ ಮುಖಂಡರಾದ ಡಾ. ಶ್ರೀನಿವಾಸ್ ಕರಿಯಣ್ಣ, ವೈ.ಎಚ್. ನಾಗರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ತಿಪ್ಪೇಶ್ ರಾವ್, ಗ್ರಾಮದ ಮುಖಂಡರಾದ ತರದ ರವಿಕುಮಾರ್, ಎಚ್.ಬಿ. ರುದ್ರಪ್ಪ, ಹಾಲಪ್ಪ, ಮಂಜಪ್ಪ, ದಾನೇಶ್,
ಎಚ್. ಆರ್. ಬಸವರಾಜಪ್ಪ, ಕುಮಾರ್ ನಾಯ್ಡು ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT