ಆನವಟ್ಟಿ: ಸ್ವಾತಂತ್ರ ನಂತರ ದೇಶದಲ್ಲಿ ಬಡತನ ತಾಂಡವಾಡುತ್ತಿತ್ತು. ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಅವರ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿವು ಮುಕ್ತ ಕರ್ನಾಟಕ ಮಾಡಲು ಕ್ಯಾಂಟೀನ್ ಯೋಜನೆ ರೂಪಿಸಿ ಇಂದಿರಾ ಗಾಂಧಿ ಅವರ ಹೆಸರನ್ನೇ ನಾಮಕರಣ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ತಿಳಿಸಿದರು.

ಭಾನುವಾರ ಆನವಟ್ಟಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಮಾಡಿರುವ ನೂತನಾ ಇಂದಿರಾ ಕ್ಯಾಟೀನ್ ಲೋಕಾರ್ಪಣೆ ಮಾಡಿ ಮಾತನಾಡಿದರು.

ಪೌರ ಕಾರ್ಮಿಕರು, ಆಸ್ಪತ್ರೆ ಸಿಬ್ಬಂದಿ, ರೋಗಿಗಳು, ಶ್ರಮಿಕ ವರ್ಗದ ಪ್ರತಿಯೊಬ್ಬರಿಗೂ ₹ 5ಕ್ಕೆ ಉಪಹಾರ , ₹ 10ಕ್ಕೆ ಮಧ್ಯಾಹ್ನದ ಊಟ ನೀಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಿ ಎಂದರು. ಜೊತೆಗೆ ಆಹಾರ ತಯಾರಕರು ಗುಣಮಟ್ಟ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.

ಸ್ವಚ್ಛತೆಗೆ ಆಧ್ಯತೆ ನೀಡಿ;

‘ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು, ನಾವು ಬಳಸಿರುವ ನೀರಿನ ಬಾಟಲ್, ಟೀ ಕಪ್, ಪ್ಲಾಸ್ಟಿಕ್ ಕವರ್ಗಳನ್ನು ನಾವೇ ತೆಗೆದುಕೊಂಡು ಹೋಗಿ ಡಸ್ಟ್ಬಿನ್ಗಳಿಗೆ ಹಾಕುವ ಒಳ್ಳೆಯ ಅಭ್ಯಾಸ ಬೆಳಿಸಿಕೊಳ್ಳಬೇಕು. ಪೌರ ಕಾರ್ಮಿಕರೇ ಸ್ವಚ್ಛ ಮಾಡಲಿ ಎಂಬ ಮನೋಭಾವ ಬೇಡ. ಪಟ್ಟಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಅವರೊಂದಿಗೆ ನಾವು ಕೈಜೋಡಿಸೋಣ ಎಂದರು.

ಮೂರು ವರ್ಷದಿಂದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗಾಗಿ ಎದುರು ನೋಡುತ್ತಿದ್ದ ಸಾರ್ವಜನಿಕರು ಕ್ಯಾಂಟೀನ್ಗೆ ಆಗಮಿಸಿ ಉಪಹಾರ ಸೇವಿಸಿ ಸಂತಸ ವ್ಯಕ್ತಪಡಿಸಿದರು. ಆಸ್ಪತ್ರೆ ಆವರಣದಲ್ಲೇ ನಿರ್ಮಾಣ ಮಾಡಲು ಕಾರಣರಾದ ಸಚಿವ ಮಧು ಬಂಗಾರಪ್ಪ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಚಿವ ಮಧು ಬಂಗಾರಪ್ಪ ಅವರು ಪೌರ ಕಾರ್ಮಿಕರು, ಕೃಷಿಕರು ಹಾಗೂ ಕಾರ್ಯಕರ್ತರೊಂದಿಗೆ ಆಹಾರ ಸೇವಿಸಿ, ಗುಣಮಟ್ಟವನ್ನು ಪರೀಕ್ಷಿಸಿದರು.

ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯರಾದ ಅನೀಶ್ ಪಾಟೀಲ್, ಕೃಷ್ಣಪ್ಪ ತಲ್ಲೂರು, ಮಹ್ಮದ್ ಗೌಸ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಚೌಟಿ ಚಂದ್ರಶೇಖರ್ ಪಾಟೀಲ್, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಮುಖಂಡರಾದ ಕೆ.ಪಿ. ರುದ್ರಗೌಡ, ಶಿವಲಿಂಗೇಗೌಡ, ಮಧುಕೇಶ್ವರ ಪಾಟೀಲ್, ಅರುಣಕುಮಾರ್ ಸಮನವಳ್ಳಿ, ಮಂಜುನಾಥ ಕುಣೆತೆಪ್ಪ, ಜಿಲ್ಲಾ ಯೋಜನಾ ಅಧಿಕಾರಿ ಕೆ. ರಂಗಸ್ವಾಮಿ, ತಹಶೀಲ್ದಾರ್ ಕೆ. ಪುರಂದರ್, ಮುಖ್ಯಾಧಿಕಾರಿ ಎನ್. ಅರುಣಕುಮಾರ್, ಇಂಜಿನೀಯರ್ ಕಿರಣಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.