ಶನಿವಾರ, ಡಿಸೆಂಬರ್ 4, 2021
20 °C

ಶಿವಮೊಗ್ಗ: ಮಂಗನ ಕಾಯಿಲೆ; ರಾಸುಗಳಿಗೆ ‘ಡೊರಾಮೆಕ್ಷನ್' ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಮಂಗನ ಕಾಯಿಲೆ ಹರಡುವ ಉಣಗುಗಳನ್ನು ನಿಯಂತ್ರಿಸಲು ಮಲೆನಾಡಿನ ರಾಸುಗಳಿಗೆ ‘ಡೊರಾಮೆಕ್ಷನ್' ಲಸಿಕೆ ಹಾಕಲು ಆರೋಗ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ ಮುಂದಾಗಿವೆ.

ಮಳೆಗಾಲದಲ್ಲಿ ಮೇವು ಹರಸಿ ಕಾಡಿಗೆ ಹೋಗುವ ರಾಸುಗಳ ರಕ್ತ ಹೀರುವ ಉಣಗುಗಳು ಸಂತಾನೋತ್ಪತ್ತಿಗೆ ಸಜ್ಜಾಗುತ್ತವೆ. ಈ ಸಮಯದಲ್ಲಿ ಲಸಿಕೆ ಹಾಕಿಸಿಕೊಂಡ ರಾಸುಗಳ ಮೈಸೇರುವ ಉಣಗುಗಳು ಬೇಗನೆ ಜೀವ ಕಳೆದುಕೊಳ್ಳುತ್ತವೆ. ಇದರಿಂದ ಬೇಸಿಗೆ ಸಮಯದಲ್ಲಿ ಅವುಗಳ ಸಂಖ್ಯೆ ಕ್ಷೀಣಿಸುತ್ತದೆ. ಇದರಿಂದ ಮಂಗನ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

ಹುಬ್ಬಳ್ಳಿ ಮೂಲದ ಕಂಪನಿಗೆ ಮೊದಲ ಹಂತದಲ್ಲಿ 13 ಸಾವಿರ ಡೋಸ್‌ ಲಸಿಕೆ ಪೂರೈಸಲು ಆದೇಶ ನೀಡಲಾಗಿದ್ದು, ಮಂಗನ ಕಾಯಿಲೆ ಪೀಡಿತ ಪ್ರದೇಶದ ರಾಸುಗಳಿಗೆ ಲಸಿಕೆ ಹಾಕುವ ಕಾರ್ಯಕ್ಕೆ ಜುಲೈನಿಂದಲೇ ಚಾಲನೆ ನೀಡಲಾಗಿದೆ. 

ಕೆಎಫ್‌ಡಿ ಪೀಡಿತ 70 ಗ್ರಾಮಗಳ 8 ಸಾವಿರ ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಎರಡು ರಾಸುಗಳಿಂದ ಒಂದು ಡೋಸ್‌ ನೀಡಲಾಗುತ್ತದೆ. 45 ದಿನಗಳ ನಂತರ ಮತ್ತೊಂದು ಡೋಸ್‌ ನೀಡಲಾಗುವುದು 

‘ಮಲೆನಾಡಿನಲ್ಲಿ ಜಾನುವಾರುಗಳಿಗೆ ವಿವಿಧ ಉಣಗುಳಿಂದ ಹರಡುವ ಕಾಯಿಲೆಗಳಿಗೆ ಈ ಲಸಿಕೆ ನೀಡಲಾಗುತ್ತಿತ್ತು. ಇದೇ ಮೊದಲ ಬಾರಿ ಮಂಗನ ಕಾಯಿಲೆ ನಿಯಂತ್ರಿಸಲು ಕಾಯಿಲೆ ರಹಿತ ಜಾನುವಾರುಗಳಿಗೂ ಸಾಮೂಹಿಕವಾಗಿ ನೀಡಲಾಗುತ್ತಿದೆ’ ಎಂದು ಶಿವಮೊಗ್ಗ ಪರಿಮಾಣು ಕ್ರಿಮಿ ಪರಿಶೋಧನ ಪ್ರಯೋಗ ಶಾಲೆ ನಿರ್ದೇಶಕ ಡಾ.ಎಸ್.ಕೆ. ಕಿರಣ್ ಕುಮಾರ್  ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು