ಶಿವಮೊಗ್ಗ: ಇಲ್ಲಿನ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಯ ಶುಶ್ರೂಷಕ ಸಿಬ್ಬಂದಿಯೊಬ್ಬರ ಮೊಬೈಲ್ ಫೋನ್ ಹೊತ್ತೊಯ್ದ ಮಂಗ ಮರವೇರಿ ಕುಳಿತು ಗುರುವಾರ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಿತು. ಒಂದು ಗಂಟೆಗೂ ಹೆಚ್ಚು ಕಾಲದ ಈ ಪ್ರಹಸನ ಬಾಳೆಹಣ್ಣಿನ ಆಮಿಷಕ್ಕೆ ವಾನರ ಮೈಮರೆತಿದ್ದರಿಂದ ಸುಖಾಂತ್ಯಗೊಂಡಿತು.

ನಂಜಪ್ಪ ಆಸ್ಪತ್ರೆಯ ಕಿಟಕಿಯೊಳಗೆ ಕೈ ಹಾಕಿದ ಮಂಗ, ಟೇಬಲ್ ಮೇಲೆ ಇಟ್ಟಿದ್ದ ಆಸ್ಪತ್ರೆ ಶುಶ್ರೂಷಕಿ ರೇಷ್ಮಾ ಅವರ ಮೊಬೈಲ್ ಫೋನ್ ಎತ್ತಿಕೊಂಡಿತ್ತು. ನಂತರ ಆಸ್ಪತ್ರೆ ಪಕ್ಕದ ಮರವೇರಿ ಕುಳಿತಿತ್ತು. ಮರದ ಕೊಂಬೆಯೊಂದರ ಮೇಲೆ ಬಹಳ ಹೊತ್ತು ಕುಳಿತಿದ್ದ ಮಂಗ, ಮೊಬೈಲ್ ಫೋನ್ ಹಿಡಿದುಕೊಂಡು ಝಲಕ್ ನೀಡಿತು. ಆಗಾಗ ಮೊಬೈಲ್ ಫೋನ್ ಎದೆಗವಚಿಕೊಳ್ಳುತ್ತಿತ್ತು. ಕೆಲವೊಮ್ಮೆ ಮೊಬೈಲ್ ಫೋನ್ ಪರದೆ ನೋಡುತ್ತಿತ್ತು. ಕೆಲವೊಮ್ಮೆ ಮೊಬೈಲ್ ಪೋನ್ ಸ್ಕ್ರೀನ್ ಮೇಲೆ ಕೈಯಾಡಿಸಿ, ಕಿವಿ ಹತ್ತಿರ ಹಿಡಿದುಕೊಂಡು ಫೋಸ್ ಕೊಟ್ಟಿತು.

ಮರದಲ್ಲಿ ಮೊಬೈಲ್ ಫೋನ್ ಹಿಡಿದು ಕುಳಿತು ಮಂಗ ಮಾಡುತ್ತಿದ್ದ ಚೇಷ್ಟೆ ಆಸ್ಪತ್ರೆಯ ಸುತ್ತಲೂ ದೊಡ್ಡಸಂಖ್ಯೆಯಲ್ಲಿ ನೆರೆದಿದ್ದವರಿಗೆ ತಮಾಷೆಯಾಗಿ ಕಂಡರೆ ಶುಶ್ರೂಷಕಿಗೆ ತನ್ನ ಫೋನ್ನ ಸುರಕ್ಷತೆಯ ಚಿಂತೆ ಕಾಡಿತ್ತು. ವಾನರನ ಕೈಯಿಂದ ಮೊಬೈಲ್ ಫೋನ್ ಕಸಿದುಕೊಳ್ಳಲು ಏನೆಲ್ಲ ಮಾಡಬಹುದು ಎಂಬುದನ್ನು ಅಲ್ಲಿದ್ದವರು ಚರ್ಚಿಸಿ ಆಸ್ಪತ್ರೆಯ ಸಿಬ್ಬಂದಿಗೆ ಸಲಹೆ ಕೊಟ್ಟರು. ಇನ್ನೂ ಕೆಲವರು ತಮ್ಮ ಮೊಬೈಲ್ ಫೋನ್ಗಳಲ್ಲಿ ಮಂಗನ ತುಂಟಾಟದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದರು.

ಮಂಗನಾಟದ ಪ್ರಹಸನ ಕಂಡು ಕುವೆಂಪು ರಸ್ತೆಯಲ್ಲಿ ಸಂಚರಿಸುತ್ತಿದ್ದವರು ವಾಹನ ಪಕ್ಕಕ್ಕೆ ನಿಲ್ಲಿಸಿ ಮರದತ್ತ ನೋಡುತ್ತಾ ನಿಂತಿದ್ದರಿಂದ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಯಿತು.

ಆಸ್ಪತ್ರೆಯ ಕಟ್ಟಡದ ಮೇಲೇರಿದ ಸಿಬ್ಬಂದಿ ಮೊಬೈಲ್ ಫೋನ್ ಹಿಡಿದು ಗತ್ತು ತೋರುತ್ತಿದ್ದ ಮಂಗನಿಗೆ ಬಾಳೆಹಣ್ಣು ತೋರಿಸಿ ಗಮನ ಸೆಳೆದರು. ಅದು ಹತ್ತಿರ ಬಂದು ಬಾಳೆಹಣ್ಣು ತೆಗೆದುಕೊಳ್ಳುತ್ತಿದ್ದಂತೆಯೇ ಪಟಾಕಿ ಸಿಡಿಸಿದರು. ಬೆದರಿದ ಮಂಗ ಬಾಳೆಹಣ್ಣು ಎತ್ತಿಕೊಂಡು, ಅಲ್ಲಿಯೇ ಮೊಬೈಲ್ ಫೋನ್ ಬಿಟ್ಟು ಪರಾರಿಯಾಯಿತು. ಹೀಗೆ ಮಂಗ ಮೊಬೈಲ್ ಫೋನ್ ಕದ್ದ ಪ್ರಸಂಗಕ್ಕೆ ತೆರೆಬಿದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.