ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: 15ಕ್ಕೂ ಹೆಚ್ಚು VISL ಗುತ್ತಿಗೆ ಕಾರ್ಮಿಕ ಮುಖಂಡರು ಪೊಲೀಸರ ವಶಕ್ಕೆ

ಶಾಸಕ ಸಂಗಮೇಶ್ವರ ನೇತೃತ್ವದಲ್ಲಿ ಸೋಗಾನೆಯತ್ತ ಪಾದಯಾತ್ರೆ
Last Updated 27 ಫೆಬ್ರುವರಿ 2023, 4:11 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಐಎಸ್‌ಎಲ್ ಕಾರ್ಖಾನೆ ಉಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಶಾಸಕ ಬಿ.ಕೆ.ಸಂಗಮೇಶ ನೇತೃತ್ವದಲ್ಲಿ ಸಾವಿರಾರು ಮಂದಿ ಭದ್ರಾವತಿಯಿಂದ ಸೋಗಾನೆಯ ವಿಮಾನ ನಿಲ್ದಾಣದತ್ತ ಸೋಮವಾರ ಮುಂಜಾನೆ ಪಾದಯಾತ್ರೆ ಹೊರಟಿದ್ದಾರೆ.

ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಮ್ಮ ಅಹವಾಲು ಹೇಳಿಕೊಳ್ಳುತ್ತೇವೆ‌. ಕಾರ್ಖಾನೆಯ ಭವಿಷ್ಯ ಅವರ ಕೈಯಲ್ಲಿದೆ ಎಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಈ ಹಿಂದೆ ಹೇಳಿದ್ದರು.

ಹೀಗಾಗಿ 15ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕ ಮುಖಂಡರನ್ನು ನಸುಕಿನಲ್ಲಿ ಭದ್ರಾವತಿಯ ಅವರ ಮನೆಗಳಿಗೆ ತೆರಳಿ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಭದ್ರಾವತಿಯಲ್ಲಿ ಕೆಲವು ಕಾಂಗ್ರೆಸ್ ಮುಖಂಡರ ಮನೆಗಳ ಮುಂದೆ ಪೊಲೀಸ್ ನಿಗಾ ಇಡಲಾಗಿದೆ.

ಗುತ್ತಿಗೆ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿರುವ ಸುದ್ದಿ ತಿಳಿದು ಶಾಸಕ ಸಂಗಮೇಶ್ವರ ನೇತೃತ್ವದಲ್ಲಿ ಕಾರ್ಮಿಕರು ಹಾಗೂ ಸ್ಥಳೀಯರು ಪಾದಯಾತ್ರೆ ಹೊರಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT