ಗುರುವಾರ , ಜೂನ್ 30, 2022
27 °C
‘ಪ್ರಜಾವಾಣಿ’ ಜೀವಪರ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ

ತಾಯಿ ಮೂತ್ರಪಿಂಡ ಮಗಳಿಗೆ ಯಶಸ್ವಿ ಜೋಡಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮರಿ (ಶಿವಮೊಗ್ಗ ಜಿಲ್ಲೆ): ಮಗಳ ಉಳಿವಿಗಾಗಿ ತಮ್ಮ ಒಂದು ಮೂತ್ರಪಿಂಡವನ್ನು ನೀಡುವ ಮೂಲಕ ತಾಯಿ ಮಣಿರತ್ನಾ ಸಾರ್ಥಕತೆ ಮೆರೆದಿದ್ದಾರೆ. ‘ಪ್ರಜಾವಾಣಿ’ಯ ವರದಿಗೆ ಸ್ಪಂದಿಸಿ ಜನ ನೀಡಿದ ದೇಣಿಗೆಯಿಂದ ಶಸ್ತ್ರಚಿಕಿತ್ಸೆ ಮಾಡಿಸಲಾಗಿದ್ದು, ಮಗಳು ಆರೋಗ್ಯವಾಗಿರುವುದರಿಂದ ಇದೀಗ ಕುಟುಂಬದವರು ನಿಟ್ಟುಸಿರು ಬಿಟ್ಟಿದ್ದಾರೆ.

ದ್ವೀಪದ ಚನ್ನಗೊಂಡ ಗ್ರಾಮದ ದಾರಿಗದ್ದೆಯ  ವಿಜಯಾ  ಜೈನ್‌ ಅವರಿಗೆ ಮಣಿಪಾಲದ ಕಸ್ತೂರಬಾ ಅಸ್ಪತ್ರೆಯಲ್ಲಿ ಶುಕ್ರವಾರ ಯಶಸ್ವಿಯಾಗಿ ಮೂತ್ರಪಿಂಡ ವರ್ಗಾವಣೆ ಮಾಡಲಾಗಿದೆ.

ಹಿನ್ನೆಲೆ: ತಿಂಗಳ ಹಿಂದೆ ಮೂತ್ರಪಿಂಡ ಬದಲಾವಣೆಗೆ ನೆರವು ಕೋರಿ ವಿಜಯಾ ಜೈನ್ ಅವರು ಮಾಡಿದ ಮನವಿ ಹಿನ್ನೆಲೆಯಲ್ಲಿ ಫೆಬ್ರುವರಿ 21ರಂದು ಚಿಕಿತ್ಸೆಗೆ ನೆರವಾಗುವಂತೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ನಂತರದಲ್ಲಿ ಸಿಗಂದೂರು ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಅವರು ವಿಜಯಾ ಅವರ ಮನೆಗೆ ಭೇಟಿ ಭೇಟಿ ನೀಡಿ, ಧೈರ್ಯ ಹೇಳಿ ನೆರವು ನೀಡಿದ್ದರು. ಇದರಿಂದ ಅಭಿಯಾನಕ್ಕೆ ಇನ್ನಷ್ಟು ಬಲ ಬಂದಿತ್ತು. ಸಾಮಾಜಿಕ ಜಾಲತಾಣದ ಮೂಲಕ ರಾಜ್ಯದ ಹಲವೆಡೆ ಪ್ರಸಾರಗೊಂಡ ಕಾರಣ ನೂರಾರು ಮಂದಿ ನೆರವು ನೀಡಿದರು. ಅದರ ಪರಿಣಾಮ ಒಂದು ವಾರದಲ್ಲಿ ₹ 16 ಲಕ್ಷ ಸಂಗ್ರಹವಾಗಿದ್ದರಿಂದ ಕುಟುಂಬದವರಿಗೆ ಸಮಾಧಾನವಾಗಿತ್ತು. ‘ಪ್ರಜಾವಾಣಿ’ಯ ಸಾಮಾಜಿಕ ಕಳಕಳಿಗೆ ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಟುಂಬಸ್ಥರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು