ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ವೃತ್ತಿಯಲ್ಲಿ ಪ್ರಾಮಾಣಿಕತೆ: ಸಾಧನೆಯ ಶಿಖರಕ್ಕೆ ಹಾದಿ

ನಂಜಪ್ಪ ಎಜುಕೇಶನ್ ಅಕಾಡೆಮಿ; ಮೊದಲನೇ ಗ್ರಾಜ್ಯುಯೇಶನ್ ಡೇ
Published : 24 ಆಗಸ್ಟ್ 2024, 15:25 IST
Last Updated : 24 ಆಗಸ್ಟ್ 2024, 15:25 IST
ಫಾಲೋ ಮಾಡಿ
Comments

ಶಿವಮೊಗ್ಗ: ಅಡ್ಡದಾರಿಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಸಿಗುವುದಿಲ್ಲ. ವೃತ್ತಿ ಜೀವನದಲ್ಲಿ ಸತತವಾದ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಮೈಗೂಡಿಸಿಕೊಂಡರೆ ಮಾತ್ರ ಸಾಧನೆಯ ಶಿಖರವೇರಬಹುದು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸೆನೆಟ್ ಸದಸ್ಯ ಎನ್.ಸಾಯಿಕುಮಾರ್ ಹೇಳಿದರು.

ಇಲ್ಲಿನ ನಂಜಪ್ಪ ಎಜುಕೇಶನ್ ಅಕಾಡೆಮಿಯಿಂದ ಶನಿವಾರ ನಗರದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆದ ನಂಜಪ್ಪ ಇನ್‌ಸ್ಟಿಟ್ಯೂಟ್‌ ಆಫ್ ಫಿಸಿಯೋ ಥೆರಪಿ ಅಂಡ್ ಅಲೈಡ್ ಹೆಲ್ತ್ ಸೈನ್ಸ್ ವಿದ್ಯಾರ್ಥಿಗಳ ಮೊದಲನೇ ಗ್ರಾಜ್ಯುಯೇಶನ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ಪರ್ಧಾತ್ಮಕ ಜಗತ್ತಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನಿತ್ಯ ಬದಲಾವಣೆ ಆಗುತ್ತದೆ. ಪ್ರತಿಯೊಬ್ಬರೂ ಕೌಶಲ್ಯತೆ ಮೈಗೂಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ. ಅಂದಾಗಲೇ ನಾವು ಗುಣಮಟ್ಟದ ಸೇವೆ ನೀಡಲು ಸಾಧ್ಯ. ವೈದ್ಯಕೀಯ ವೃತ್ತಿ ಆರಂಭಿಸಿದಾಗ ನಾವು ಕಾಲೇಜಿನಲ್ಲಿ ಪಡೆದ ಪದವಿ, ಅಂಕ, ಚಿನ್ನದ ಪದಕ ಯಾವುದೂ ಮುಖ್ಯವಲ್ಲ. ಎಲ್ಲದಕ್ಕೂ ಮುಖ್ಯ ತಾಳ್ಮೆಯ ಮನೋಭಾವ ಮುಖ್ಯವಾಗಿದೆ.  ರೋಗಿಗಳಿಗೆ ತಾಳ್ಮೆಯಿಂದ ಉಪರಿಸಿದಾಗ ಮಾತ್ರ ಅವರು ಗುಣಮುಖರಾಗುತ್ತಾರೆ. ಇದನ್ನು ಅರಿತುಕೊಂಡು ಚಿಕಿತ್ಸೆ ನೀಡಬೇಕು’ ಎಂದು ಹೇಳಿದರು.

‘ಫಿಸಿಯೋ ಥೆರಪಿ ಕೋರ್ಸ್‌ ಮಾಡಿದವರು ಸ್ವತಂತ್ರವಾಗಿ ವೃತ್ತಿ ಜೀವನ ಆರಂಭಿಸಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಫಿಸಿಯೋ ಥೆರಪಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಲ್ತ್ ಸೈನ್ಸ್ ಕೋರ್ಸ್ ಕೂಡ ಆ ಕ್ಷೇತ್ರಕ್ಕೆ ಬೆನ್ನೆಲುಬಾಗಿದೆ. ವಿಭಿನ್ನವಾಗಿ ಸೇವೆ ನೀಡುವಂತಹ ಚಿಂತನೆ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಅಂದಾಗಲೇ ರೋಗಿಗಳ ನಿರೀಕ್ಷೆ ಈಡೇರಿಸಬಹುದು’ ಎಂದರು.

‘ಗ್ರಾಮೀಣ ಪ್ರದೇಶದಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುವ ಅಗತ್ಯವಿದೆ. ಪ್ರತಿಯೊಬ್ಬರೂ ನಗರ ಮತ್ತು ಮೆಟ್ರೋ ಪ್ರದೇಶಗಳಲ್ಲಿ ವೃತ್ತಿ ಜೀವನ ಆರಂಭಿಸುತ್ತಾರೆ. ಆದರೆ, ಸ್ಥಳೀಯ ಮಟ್ಟದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವುದು ಅಗತ್ಯವಿದೆ’ ಎಂದು ಹೇಳಿದರು.

‘ನಂಜಪ್ಪ ಆಸ್ಪತ್ರೆಯು ಅತ್ಯಂತ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವ ಪರಿಣಾಮವಾಗಿ ಮಲೆನಾಡಿನ ಭಾಗದಲ್ಲಿ ಎಲ್ಲರ ಮನೆ ಮಾತಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಮೋಘ ಸೇವೆ ನೀಡುವ ಮೂಲಕ ಬದಲಾವಣೆಗೆ ಮುನ್ನುಡಿ ಬರೆದಿದೆ’ ಎಂದು ತಿಳಿಸಿದರು.

ನಂಜಪ್ಪ ಇನ್‌ಸ್ಟಿಟ್ಯೂಟ್‌ ಆಫ್ ಫಿಸಿಯೋ ಥೆರಪಿ ವಿಭಾಗದ ಪ್ರಾಚಾರ್ಯ ಡಾ.ಡೋನಿ ಜಾನ್ ಮಾತನಾಡಿ, ‘ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಸಿಕೊಂಡು ಉತ್ತಮವಾಗಿ ಸೇವೆ ನೀಡಬೇಕು. ಇದರಿಂದ ಬದಲಾವಣೆ ಕಾಣಲು ಸಾಧ್ಯ’ ಎಂದರು.

ಯಾವುದೇ ಕಾರಣಕ್ಕೂ ಹಣದ ಹಿಂದೆ ಬೀಳಬಾರದು. ಎಲ್ಲದಕ್ಕೂ ಹಣ ಮಾತ್ರ ಮಾನದಂಡ ಅಲ್ಲ ಎಂಬುದನ್ನು  ಮನಗಾಣಬೇಕು. ವೃತ್ತಿಯಲ್ಲಿ ನೈತಿಕತೆ ಉಳಿಸಿಕೊಳ್ಳುವುದು ಅಗತ್ಯವಿದೆ. ಜೀವನದಲ್ಲಿ ಪರಿಶ್ರಮವಿದ್ದರೇ ಸುಲಭವಾಗಿ ಗುರಿ ಮುಟ್ಟಬಹುದು ಎಂದರು.

ಎಂತಹ ಕಠಿಣ ಪರಿಸ್ಥಿತಿ ಬಂದರೂ ಆರೋಗ್ಯ ಕ್ಷೇತ್ರದಿಂದ ಹಿಂದಕ್ಕೆ ಸರಿಯಬಾರದು. ವೈದ್ಯಕೀಯ ಲೋಕದಲ್ಲಿ ನಿತ್ಯ ಬದಲಾವಣೆ ಆಗುತ್ತದೆ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಅಂದಾಗಲೇ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ನಂಜಪ್ಪ ಆಸ್ಪತ್ರೆಯು ಪರಿಣಾಮಕಾರಿಯಾಗಿ ಸೇವೆ ನೀಡುತ್ತಿದೆ. ಹೀಗಾಗಿಯೇ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಚಿಕಿತ್ಸೆ ಈ ಭಾಗದ ಜನರಿಗೆ ಸುಲಭವಾಗಿ ಸಿಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸೇವೆ ಅಮೋಘ ಎಂದು ತಿಳಿಸಿದರು.

ನಂಜಪ್ಪ ಎಜುಕೇಶನ್ ಅಕಾಡೆಮಿ ಚೇರ್ಮನ್ ಡಿ.ಬಿ. ಅವಿನಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂಜಪ್ಪ ಎಜುಕೇಶನ್ ಅಕಾಡೆಮಿ ಟ್ರಸ್ಟಿ ಅಮೃತ್ ಇದ್ದರು.

ಶಿವಮೊಗ್ಗದ ನಂಜಪ್ಪ ಏಜ್ಯುಕೇಶನ್ ಅಕಾಡೆಮಿ ವತಿಯಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ಮೊದಲನೇ ಕಾನ್ವೋಕೇಶನ್‌ ಗ್ರಾಜ್ಯುಯೇಶನ್ ಡೇ ಕಾರ್ಯಕ್ರಮವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಎನ್. ಸಾಯಿಕುಮಾರ್ ಉದ್ಘಾಟಿಸಿದರು. 
ಶಿವಮೊಗ್ಗದ ನಂಜಪ್ಪ ಏಜ್ಯುಕೇಶನ್ ಅಕಾಡೆಮಿ ವತಿಯಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ಮೊದಲನೇ ಕಾನ್ವೋಕೇಶನ್‌ ಗ್ರಾಜ್ಯುಯೇಶನ್ ಡೇ ಕಾರ್ಯಕ್ರಮವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಎನ್. ಸಾಯಿಕುಮಾರ್ ಉದ್ಘಾಟಿಸಿದರು. 

75 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಒಟ್ಟು 75 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ಪ್ರದಾನ ಕಾರ್ಯಕ್ರಮಕ್ಕೆ  ಪಾಲಕರು ಮತ್ತು ಪೋಷಕರು ಸಾಕ್ಷಿಯಾಗಿದ್ದರು. ಮಕ್ಕಳ ಸಾಧನೆಯನ್ನು ಕಣ್ಣಾರೆ ನೋಡಿ ಖುಷಿಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT