ಶುಕ್ರವಾರ, ಮೇ 27, 2022
21 °C

20ರಿಂದ 22ರ ವರೆಗೆ ಸಾಗರದಲ್ಲಿ ರಾಷ್ಟ್ರೀಯ ಸಂಗೀತೋತ್ಸವ ಆಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಇಲ್ಲಿನ ವೇದನಾದ ಪ್ರತಿಷ್ಠಾನ ಹಾಗೂ ಶ್ರೀಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯವು ಗಾಂಧಿ ಮೈದಾನದಲ್ಲಿ ನ. 20ರಿಂದ 22ರ ವರೆಗೆ ಏಕವಿಂಶ ರಾಷ್ಟ್ರೀಯ ಸಂಗೀತೋತ್ಸವವನ್ನು ಆಯೋಜಿಸಿದೆ ಎಂದು ವಿದ್ಯಾಲಯದ ವಿದುಷಿ ವಸುಧಾ ಶರ್ಮ ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ.20ರಂದು ಬೆಳಿಗ್ಗೆ 8.30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, 12ಕ್ಕೆ ಬೆಂಗಳೂರಿನ ರಘುನಂದನ ಭಟ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸಂಜೆ 5.30ಕ್ಕೆ ಕೋಲ್ಕತ್ತಾದ ರಿಂಪಾ ಶಿವ ಅವರಿಂದ ತಬಲಾ ವಾದನ, ರಾತ್ರಿ 9ಕ್ಕೆ ಗೋವಾದ ಶಶಾಂಕ್ ಮುಖ್ತೇದಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ’ ಎಂದರು.

21ರಂದು ಬೆಳಿಗ್ಗೆ 8.30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, 12ಕ್ಕೆ ಬೆಂಗಳೂರಿನ ಅನಿರುದ್ಧ ಐತಾಳ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸಂಜೆ 7.30ಕ್ಕೆ ವಸುಧಾ ಶರ್ಮ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ರಾತ್ರಿ 9ಕ್ಕೆ ‘ಯಕ್ಷ ಸಂಗೀತ’ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಯಕ್ಷ ಸಂಗೀತದಲ್ಲಿ ಕಾರ್ತಿಕ್ ಚಿಟ್ಟಾಣಿ, ಸುಧೀರ್ ಉಪ್ಪೂರು ಅವರಿಂದ ಭಾವಾಭಿನಯ, ಪ್ರಸನ್ನ ಭಟ್ ಬಾಳ್ಕಲ್ ಅವರ ಭಾಗವತಿಕೆ, ಸುನೀಲ್ ಭಂಡಾರಿ ಕಡತೋಕ ಅವರಿಂದ ಮದ್ದಲೆ, ಸುಜನ್ ಕುಮಾರ್ ಹಾಲಾಡಿ ಅವರಿಂದ ಚೆಂಡೆ ವಾದನ ಇರುತ್ತದೆ ಎಂದರು.

22ರಂದು ಬೆಳಿಗ್ಗೆ 8.30ಕ್ಕೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಗಾಯನ, 12.30ಕ್ಕೆ ಧಾರವಾಡದ ವಿಜಯ ಪಾಟೀಲ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, 6.30ಕ್ಕೆ ಬೆಂಗಳೂರಿನ ನಿರಂಜನ್ ದಿಂಡೋಡಿ ಅವರಿಂದ ಕರ್ನಾಟಕಿ ಸಂಗೀತ, ರಾತ್ರಿ 9.30ಕ್ಕೆ ದೆಹಲಿಯ ಶಾಶ್ವತಿ ಮಂಡಲ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ ಎಂದರು. ವಿದ್ಯಾಲಯದ ನರಸಿಂಹಮೂರ್ತಿ ಹಳೆ ಇಕ್ಕೇರಿ, ಐ.ವಿ. ಹೆಗಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು