ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಮುಖಿ ಚಿಂತನೆ ಅಗತ್ಯ: ಕೆ.ಅಜ್ಜಪ್ಪ

ಬ್ರಹ್ಮಶ್ರೀ ನಾರಾಯಣಗುರು 166ನೇ ಜಯಂತ್ಯುತ್ಸವ
Last Updated 1 ಅಕ್ಟೋಬರ್ 2020, 8:34 IST
ಅಕ್ಷರ ಗಾತ್ರ

ಸೊರಬ: ಪ್ರತಿಯೊಬ್ಬರೂ ಸಮಾಜದ ಅಭಿವೃದ್ಧಿಗೆ ಸಂಘಟಕರಾಗುವ ಮೂಲಕ ಸಮಾಜಮುಖಿ ಚಿಂತನೆ ಮೈಗೂಡಿಸಿಕೊಳ್ಳಬೇಕಿದೆ ಎಂದು ತಾಲ್ಲೂಕು ಆರ್ಯ ಈಡಿಗ ಸಂಘದ ಅಧ್ಯಕ್ಷ ಕೆ.ಅಜ್ಜಪ್ಪ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ತಾಲ್ಲೂಕು ಆರ್ಯ ಈಡಿಗರ (ದೀವರ) ಸಂಘ, ಬ್ರಹ್ಮಶ್ರೀ ನಾರಾಯಣಗುರು ಸೇವಾ ಪ್ರತಿಷ್ಠಾನ, ಬಿಎಸ್‍ಎನ್‍ಡಿಪಿ ತಾಲ್ಲೂಕು ಘಟಕ ಸಂಯುಕ್ತ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು 166ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ರಾಜೇಶ್ವರಿ, ‘ಸಂಘಟನೆಯ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ನಾಗರಾಜ್ ಚಿಕ್ಕಸವಿ, ‘ರಾಜ್ಯಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕೊಡುಗೆ ಹಿರಿದಾಗಿದ್ದು, ಅವರ ಜಯಂತಿ ಆಚರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದರು.

ಬ್ರಹ್ಮಶ್ರೀ ನಾರಾಯಣಗುರು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜಗದೀಶ್ ಒ.ಕೆ. ಕುಳವಳ್ಳಿ ಮಾತನಾಡಿದರು.

ರಂಗಪ್ಪ ಹಳೇಸೊರಬ, ರಂಗಪ್ಪ ಕುಮ್ಮೂರು, ಜಯಕುಮಾರ್ ಶಿಗ್ಗಾ, ಗಿರಿಯಪ್ಪ ತೆಕ್ಕೂರು, ನವೀನ್ ಹಿರೇಇಡಗೋಡು, ಹನುಮಂತಪ್ಪ ತವನಂದಿ, ಶ್ರೀಧರ್ ಕೊಡಕಣಿ, ಪರಮೇಶ್ವರಪ್ಪ ಕುಳವಳ್ಳಿ, ಮಿಲನ್ ದೊಡ್ಡೇರಿ, ಪ್ರಿಯಾಂಕಾ ಹರಳೆ, ಸಚಿನ್ ಹೆಸರಿ, ಶೈಕ್ಷಣಿಕ ಕ್ಷೇತ್ರದಲ್ಲಿ ಕಾವ್ಯಾ ಕಲ್ಲಂಬಿ ಅವರನ್ನು ಸನ್ಮಾನಿಸಲಾಯಿತು.

ಬಿಎಸ್‍ಎನ್‌ಡಿಪಿ ಜಿಲ್ಲಾ ಘಟಕ ಅಧ್ಯಕ್ಷ ಪ್ರವೀಣ್ ಹಿರೇಇಡಗೋಡು, ತಾಲ್ಲೂಕು ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ತಾರಾ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪುರುಷೋತ್ತಮ್, ಮೀನಾಕ್ಷಿ, ಎಂ.ಡಿ. ಉಮೇಶ್, ಜೆ. ಪ್ರಕಾಶ್, ಮಂಜುನಾಥ್ ಹಳೇಸೊರಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT