ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಶುಕ್ರವಾರ ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜ್ಕುಮಾರ್ ಚಾಲನೆ ನೀಡಿದರು.

ನಗರಸಭೆ ಮೈದಾನದಲ್ಲಿ ಚಿಕ್ಕಮಗಳೂರು ಗ್ರೀನ್ ಪೂಡ್ ಪ್ರಿಂಟ್ ಟ್ರಸ್ಟ್ ಸಹಯೋಗದೊಂದಿಗೆ ನಗರಸಭೆ ವತಿಯಿಂದ ಹೊಸಮನೆ ಮುಖ್ಯರಸ್ತೆ ಸಂತೆ ಮೈದಾನದಲ್ಲಿರುವ ಮಳಿಗೆಗಳ ಕಟ್ಟಡದಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.

ತಾಲ್ಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಡಿ.ಬಿ. ಶಿವರಾಜ್ ಮಾರ್ಗದರ್ಶನದಲ್ಲಿ ಡಾ.ವಿಜಯಶಂಕರ್ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದು, ಕಾರ್ಯಕರ್ತರು, ನಗರಸಭೆ ಪೌರಕಾರ್ಮಿಕರ ಸಹಕಾರದೊಂದಿಗೆ ನಗರಸಭೆ ವ್ಯಾಪ್ತಿಯ ವಿವಿಧ ನಾಯಿಗಳನ್ನು ಪ್ರತಿದಿನ ಹಿಡಿದು ಶಸ್ತ್ರಚಿಕಿತ್ಸೆ ಸ್ಥಳಕ್ಕೆ ತರಲಾಗುತ್ತಿದೆ.

ನಗರಸಭೆ ವ್ಯಾಪ್ತಿಯಲ್ಲಿ ಅಂದಾಜು 6,000 ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದ್ದು, ಈ ಬಾರಿ ಅಂದಾಜು 1,600 ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ಗುರಿ ಹೊಂದಲಾಗಿದೆ. ಕಳೆದ ಬಾರಿ 1,000 ನಾಯಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.

ಗೂಗಲ್ ಮ್ಯಾಪ್ ವಿಳಾಸ ಆಧರಿಸಿ ಬೀದಿ ನಾಯಿಗಳನ್ನು ಹಿಡಿದು ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ನಂತರ ಮೂರು ದಿನ ಅವುಗಳನ್ನು ಆರೈಕೆ ಮಾಡಿ ಪುನಃ ಅವುಗಳ ನಿಗದಿತ ಸ್ಥಳಕ್ಕೆ ಬಿಡಲಾಗುವುದು ಎಂದು ನಗರಸಭೆ ಸಿಬ್ಬಂದಿ ತಿಳಿಸಿದ್ದಾರೆ.

‘ಶಸ್ತ್ರಚಿಕಿತ್ಸೆ ಸಮಯದಲ್ಲಿ ನಾಯಿಗಳಿಗೆ ಸೋಂಕು ಹರಡದಂತೆ ನಿವಾರಕ ಬಳಸಲಾಗುತ್ತಿದ್ದು, ಅಲ್ಲದೆ ರೇಬಿಸ್ ನಿರೋಧಕ ಚುಚ್ಚು ಮದ್ದು ನೀಡಲಾಗುತ್ತಿದೆ. ಇದರಿಂದ ಬೀದಿ ನಾಯಿಗಳು ಒಂದು ವೇಳೆ ಮನುಷ್ಯರ ಮೇಲೆ ದಾಳಿ ಮಾಡಿದಾಗ ರೇಬಿಸ್ ರೋಗಾಣುಗಳು ಹರಡುವುದಿಲ್ಲ. ಶಸ್ತ್ರಚಿಕಿತ್ಸೆ ನಡೆಸಿದ ನಾಯಿಗಳನ್ನು ಸುಲಭವಾಗಿ ಗುರುತಿಸಲು ಅವುಗಳ ಒಂದು ಭಾಗದ ಕಿವಿಯನ್ನು ಸುಮಾರು ಅರ್ಧ ಇಂಚು ಪಂಚ್ ಮಾಡಿ ಕತ್ತರಿಸಲಾಗುತ್ತಿದೆ. ಪ್ರತಿದಿನ ಅಂದಾಜು 20ರಿಂದ 25 ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಯಲಿದೆ’ ಎಂದು ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ಎಂ. ಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್, ಆಯುಕ್ತರಾದ ಪ್ರಕಾಶ್ ಎಂ. ಚನ್ನಪ್ಪನವರ್, ಪರಿಸರ ಎಂಜಿನಿಯರ್ ಪ್ರಭಾಕರ್, ಸದಸ್ಯರಾದ ಲತಾ ಚಂದ್ರಶೇಖರ್, ಮುಖಂಡರಾದ ಬಿ. ಗಂಗಾಧರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.