ನ್ಯಾಮತಿ: ತೀವ್ರ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಸಂಬಂಧಿಕರು ಹಾಗೂ ತಾಲ್ಲೂಕಿನ ಫಲವನಹಳ್ಳಿ ಗ್ರಾಮಸ್ಥರು ಇಲ್ಲಿನ ಸಮುದಾಯ ಆಸ್ಪತ್ರೆಗೆ ಶುಕ್ರವಾರ ಮುತ್ತಿಗೆ ಹಾಕಿದರು.

ಫಲವನಹಳ್ಳಿ ಗ್ರಾಮದ ವಿರೂಪಾಕ್ಷ ಅವರ ಪತ್ನಿ ಎಂ. ಪವಿತ್ರಾ (28) ಮೃತಪಟ್ಟ ಬಾಣಂತಿ.

ಘಟನೆಯ ವಿವರ: ವಿರೂಪಾಕ್ಷ ಅವರು ತಮ್ಮ ಪತ್ನಿಯನ್ನು ಮೂರನೇ ಹೆರಿಗೆಗೆ ಬುಧವಾರ ಸಂಜೆ 5 ಗಂಟೆಗೆ ನ್ಯಾಮತಿಯ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದರು. ತಡರಾತ್ರಿ 2 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ ಪವಿತ್ರಾ ಅವರಿಗೆ ತೀವ್ರ ರಕ್ತಸ್ರಾವ ಆಗಿದೆ. ಬೆಳಿಗ್ಗೆ 4 ಗಂಟೆ ವೇಳೆಗೆ ವೈದ್ಯರು ಆಂಬುಲೆನ್ಸ್ನಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದರು. ಆಸ್ಪತ್ರೆಯನ್ನು ತಲುಪುವ ಮುನ್ನ ಮಾರ್ಗಮಧ್ಯೆಯೇ ಬಾಣಂತಿಯು ರಕ್ತಸ್ರಾವದಿಂದ ನಿತ್ರಾಣರಾಗಿ ಪ್ರಜ್ಞಾಹೀನರಾದರು. ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಆದರೆ ಅವರು ಗುರುವಾರ ರಾತ್ರಿ ಮೃತಪಟ್ಟರು.

ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಆಂಬುಲೆನ್ಸ್ನಲ್ಲಿ ಬೇರೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬಾಣಂತಿ ಸಾವಿಗೆ ನ್ಯಾಮತಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಸಂಬಂಧಪಟ್ಟ ವೈದ್ಯರು ತಪ್ಪೊಪ್ಪಿಗೆ ನೀಡಬೇಕು ಎಂದು ಪಟ್ಟು ಹಿಡಿದರು.

‘ರಾತ್ರಿ ಪಾಳಿಯ ವೈದ್ಯರು ಮದ್ಯಪಾನ ಮಾಡಿ ಬರುತ್ತಾರೆ. ನರ್ಸ್ಗಳು ಹೆರಿಗೆ ಮಾಡಿಸಿ ಹಣಕ್ಕೆ ಒತ್ತಾಯ ಮಾಡುತ್ತಾರೆ. ಆಂಬುಲೆನ್ಸ್ ಚಾಲಕರು ಹಣ ಕೇಳುತ್ತಾರೆ’ ಎಂದು ಆರೋಪಿಸಿದ ಗ್ರಾಮಸ್ಥರು, ಆಸ್ಪತ್ರೆಯ ಆಡಳಿತಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಹೆರಿಗೆ ಮಾಡಿಸಿದ ವೈದ್ಯರು ಕ್ಷಮೆಯಾಚನೆ ಮಾಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಂ.ಪಿ.ಬಸವರಾಜ, ಗ್ರಾಮದ ಹಿರಿಯರಾದ ಜೆ.ಹಳದಪ್ಪ, ಎಂ.ಆರ್.ಗಣೇಶ, ಎಸ್.ಟಿ.ನಾಗರಾಜಪ್ಪ, ಚೋರಡಿ ನಾಗಪ್ಪ, ವಿರೂಪಾಕ್ಷಪ್ಪ, ಹುಬ್ಬಳ್ಳಿ ಮಂಜಪ್ಪ, ಹವಳಿ ಮಂಜಪ್ಪ, ಬಿ.ಆರ್.ಅಣ್ಣಪ್ಪ ಮತ್ತು ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-43-1312855372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.