ರಿಪ್ಪನ್ ಪೇಟೆ (ಶಿವಮೊಗ್ಗ): ಶಿವಮೊಗ್ಗದಿಂದ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ದೆಮ್ಲಾಪುರಕ್ಕೆ ತೆರಳುತ್ತಿದ್ದ ಒಮ್ಮಿ ಕಾರಿಗೆ ಬೆಳ್ಳೂರು ಬಂಗ್ಲಿ ದಿಬ್ಬದ ಬಳಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಶನಿವಾರ ತಡರಾತ್ರಿ ಸಂಪೂರ್ಣ ಸುಟ್ಟು ಹೋಗಿದೆ.

ದೆಮ್ಲಾಪುರದ ಗಂಗಾಧರ್ ಎಂಬುವವರಿಗೆ ಸೇರಿದ ಒಮ್ನಿ ವಾಹನ ಇದಾಗಿದೆ.

ಚಾಲಕ ಶ್ರೀಕಾಂತ್ ಹಾಗೂ ಮಾಲಿಕ ಗಂಗಾಧರ್ ಇಬ್ಬರು ವಾಹನದಿಂದ ಇಳಿದು ಅಪಾಯದಿಂದ ಪಾರಾಗಿದ್ದಾರೆ.

ಗಂಗಾಧರ್ ಅವರ ಮನೆಯಲ್ಲಿ ಮದುವೆ ಕಾರ್ಯದ ನಿಮಿತ್ತ ಶಿವಮೊಗ್ಗದಿಂದ ದಿನಸಿ ಸಾಮಗ್ರಿಗಳನ್ನು ತುಂಬಿಕೊಂಡು ಊರಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.

ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.