ರಿಪ್ಪನ್ಪೇಟೆ: ಜೈನರ ಪ್ರಸಿದ್ಧ ತೀರ್ಥಕ್ಷೇತ್ರ ಹೊಂಬುಜ ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಯಕ್ಷಿ ಪದ್ಮಾವತಿ ದೇವಿಯ ವಾರ್ಷಿಕ ಮಹಾ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಗುರುವಾರ ಬೆಳಿಗ್ಗೆಯಿಂದಲೇ ದೇವಸ್ಥಾನದ ಪ್ರಧಾನ ಪುರೋಹಿತರಾದ ಪದ್ಮರಾಜ ಇಂದ್ರ ಹಾಗೂ ಸಹ ಪುರೋಹಿತ ವರ್ಗವು ನಿತ್ಯವಿಧಿ ಸಹಿತ ಪಾರ್ಶ್ವನಾಥ ಸ್ವಾಮಿ ಹಾಗೂ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಅಭಿಷೇಕ, ಪೂಜಾ ವಿಧಿ–ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.

ನಂತರ ಮಾತೆ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯು ದೇಗುಲದ ಒಳ ಆವರಣದಲ್ಲಿ ಮೂರು ಸುತ್ತು ಪ್ರದಕ್ಷಣೆ ಹಾಕಿ ದೇವಸ್ಥಾನದ ಮುಂಭಾಗದಲ್ಲಿ 41 ಅಡಿ ಎತ್ತರದ ಪಂಚವರ್ಣಗಳಿಂದ ಕೂಡಿದ, ಧರ್ಮ ಪತಾಕೆಯ ಬಾವುಟಗಳಿಂದ ಅಲಂಕೃತಗೊಂಡ, ಮಹಾ ರಥದಲ್ಲಿ ಮಧ್ಯಾಹ್ನ 12.27ರ ಮೂಲ ನಕ್ಷತ್ರದಲ್ಲಿ ಮಾತೆ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯನ್ನು ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಭಟ್ಟಾಚಾರ್ಯ ವರ್ಯಾ ಸ್ವಾಮೀಜಿ ಅವರ ನೇತೃತ್ವದಲ್ಲಿ ಮರದ ತೇರಿನಲ್ಲಿ ಪ್ರತಿಷ್ಠಾಪಿಸಲಾಯಿತು.

ರಾಜ ಗಾಂಭೀರ್ಯದ ಗಜ ರಾಣಿ ಐಶ್ವರ್ಯ ತನ್ನ ಎರಡು ಮುಂಗಾಲುಗಳನ್ನು ಮೇಲೆತ್ತಿ ದೇವಿಗೆ ಗಿಳಿಟ್ಟು ನಮಸ್ಕರಿಸಿದಳು. ಭಕ್ತರ ಹರ್ಷೋದ್ಘಾರ ಮೊಳಗಿಸಿ ಬಾಳೆಹಣ್ಣು ಮತ್ತು ಹೂವುಗಳನ್ನು ರಥದತ್ತ ಎಸೆದು ಭಕ್ತಿ ಸಮರ್ಪಿಸಿದರು.

ರಥದ ತೇರು ಗ್ರಾಮದ ಅಜ್ಜಪ್ಪನ ಕಟ್ಟೆ ಮಾರ್ಗವಾಗಿ ಹೊರಟು ಊರ ಬಾಗಿಲ ಮೂಲಕ ರಾಜಬೀದಿಯಲ್ಲಿ ಶೋಭ ಯಾತ್ರೆ ಮುಗಿಸಿ ಸಂಜೆ 7.30ಕ್ಕೆ ದೇವಸ್ಥಾನದ ಆವರಣ ತಲುಪಿತು.

ಜಾತ್ರೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ಇಂಪಾಲ, ಗೋಕಾಕ್, ಮಹಾರಾಷ್ಟ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಮಠದ ಶ್ರೀಗಳು ರಥೋತ್ಸವಕ್ಕೆ ಚಾಲನೆ ಕೊಟ್ಟು ದೇವಿಯಲ್ಲಿ ಬೇಡಿಕೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ವಿಶ್ವದಲ್ಲೆಡೆ ಶಾಂತಿ ನೆಲೆಸಲಿ. ದೇಶ ಸುಭಿಕ್ಷವಾಗಿ ಮಳೆ ಬೆಳೆ ಬರಲೆಂದು ದೇವಿಯಲ್ಲಿ ಪ್ರಾರ್ಥಿಸಿದರು.

ದಾಸೋಹ ಪಾನೀಯ ವ್ಯವಸ್ಥೆ

ಸಾವಿರಾರು ಭಕ್ತರಿಗೆ ಜೈನ ಸಮುದಾಯದ ಮೈಸೂರಿನ ಅರಳಿಕಟ್ಟೆ ಕುಟುಂಬದವರು ಸಾಮೂಹಿಕ ಅನ್ನ ಸಂತ ರ್ಪಣೆ ಏರ್ಪಡಿಸಿದ್ದರು. ಸುಡು ಬಿಸಿಲನಲ್ಲಿ ನಿಂತಿದ್ದ ಭಕ್ತರಿಗೆ ಹರಿಹರದ ಜೈನ ಸಮುದಾಯದ ವತಿಯಿಂದ ಪಾನೀಯ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.