ಶಿವಮೊಗ್ಗ:ರೌಡಿಶೀಟರ್ ದೀಪುಗೆ ಪೊಲೀಸರ ಗುಂಡೇಟು

ಶಿವಮೊಗ್ಗ: ನಗರದ ಅನುಪಿನಕಟ್ಟೆ ಬಳಿ ಶುಕ್ರವಾರ ರೌಡಿಶೀಟರ್ ದೀಪು ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ತೀವ್ರವಾಗಿ ಗಾಯಗೊಂಡ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನ ವರಪ್ಪನ ಅಗ್ರಹಾರದಲ್ಲಿರುವ ರೌಡಿ ಬಚ್ಚನ್ ತನ್ನ ಸಹಚರರ ಮೂಲಕ ಶಿವಮೊಗ್ಗದ ವ್ಯಾಪಾರಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನು. ಹಣಕೊಡದೇ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದ ಕಾರಣ ಕುಪಿತಗೊಂಡ ಆತನ ತಂಡ ಅವರ ಮೇಲೆ ಹಲ್ಲೆ ನಡೆಸಿತ್ತು. ಈ ಗುಂಪಿನ ನೇತೃತ್ವ ವಹಿಸಿದ್ದ ದೀಪುವನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ತುಂಗಾನಗರ ಇನ್‌ಸ್ಪೆಕ್ಟರ್ ದೀಪಕ್ ರಿವಾಲ್ವಾರ್‌ನಿಂದ ಕಾಲಿಗೆ ಗುಂಡು ಹಾರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.