ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಮುಖಂಡರು ಹಸಿರು ಶಾಲು ಧರಿಸುವುದು ಸಲ್ಲದು: ಸಿರಿಗೆರೆ ಶ್ರೀ

Last Updated 26 ಮೇ 2022, 3:06 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜಕೀಯ ಪಕ್ಷಗಳ ಮುಖಂಡರು ರೈತರ ಹೆಸರಿನಲ್ಲಿ ಹಸಿರು ಶಾಲು ಹಾಕುವುದು ಸಲ್ಲದು. ಹಾಕುವುದಾದರೆ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ಕೊಟ್ಟು ಶಾಲು ಧರಿಸಬೇಕು. ರೈತ ಸಂಘಟನೆಗಳು ಸಕ್ರಿಯ ರಾಜಕಾರಣದಿಂದ ದೂರ ಉಳಿಯಬೇಕು’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಶಿವಮೊಗ್ಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರೈತ ಮುಖಂಡ ಎಚ್‌.ಆರ್.ಬಸವರಾಜಪ್ಪ ಅವರ 50 ವರ್ಷಗಳ ರೈತ ಹೋರಾಟದ ಅನುಭವಗಳನ್ನು ಒಳಗೊಂಡ ‘ಹಸಿರು ಹಾದಿಯ ಕಥನ’ ಪುಸ್ತಕ ಹಾಗೂ ಸಾಕ್ಷ್ಯ ಚಿತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜಕೀಯ ಪಕ್ಷಗಳು ರೈತರ ಹೆಸರಿನಲ್ಲಿ ವಿಭಾಗಗಳನ್ನು ಮಾಡಿಕೊಂಡಿವೆ. ಹಾಗೆ ಮಾಡಿಕೊಂಡರೂ ಅವರ ಪಕ್ಷದ ಶಾಲುಗಳನ್ನು ಬಳಸಬೇಕು. ರೈತ ಸಂಘಟನೆಗಳು ರಾಜಕೀಯದಿಂದ ದೂರ ಉಳಿದು ಹೋರಾಟ ನಡೆಸಬೇಕು. ಹಿಂದೆ ರಾಜಕೀಯ ಹಿತಾಸಕ್ತಿಯತ್ತ ಚಿತ್ತ ಹರಿಸಿದ ಕಾರಣ ಸಂಘಟನೆ ಛಿದ್ರವಾಗಿತ್ತು. ರೈತ ಮುಖಂಡರು ಸ್ವಾರ್ಥ, ಅಧಿಕಾರ ದಾಹ ಇಲ್ಲದೇ ಸಂಘಟನೆ ಬಲಪಡಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಬಸವಣ್ಣ ಹುಟ್ಟಿನ ಆಧಾರದಲ್ಲಿ ಮನುಷ್ಯರನ್ನು ಗುರುತಿಸಲಿಲ್ಲ. ಎಲ್ಲ ಜಾತಿಗಳನ್ನೂ ಸೇರಿಸಿಕೊಂಡು ಸಂಘಟಿತ ಹೋರಾಟ ರೂಪಿಸಿದರು. ಬಸವಣ್ಣನವರಿಗೂ ಮೊದಲು ಇದ್ದ ಜಾತಿಯ ಸೋಂಕು ಲಿಂಗಾಯತ ಧರ್ಮವನ್ನೂ ಸೇರಿಕೊಂಡಿದೆ. ಒಳ ಪಂಗಡಗಳಲ್ಲೂ ಜಾತಿ ತಾರತಮ್ಯ ನುಸುಳಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT