ತೀರ್ಥಹಳ್ಳಿ: ತಾಪಮಾನ ಏರಿಕೆಯಾದಂತೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆರಂಭಗೊಂಡಿದೆ. ವಿದ್ಯುತ್ ಪೂರೈಕೆಯಲ್ಲಿ ಸತತವಾಗಿ ತಾಂತ್ರಿಕ ದೋಷ ಉಂಟಾಗುತ್ತಿದ್ದು, ಸಾಗುವಳಿ ಭೂಮಿಗೆ ನೀರು ಹಾಯಿಸಲಾಗದೆ ರೈತರು ಪೇಚಿಗೆ ಸಿಲುಕಿಕೊಂಡಿದ್ದಾರೆ.

‘ಮೆಸ್ಕಾಂಗೆ ವಿದ್ಯುತ್ ಪೂರೈಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. 415 ವೋಲ್ಟೇಜ್ ವಿದ್ಯುತ್ ಲಭಿಸುತ್ತಿಲ್ಲ. ಗಂಟೆಗಟ್ಟಲೇ ವಿದ್ಯುತ್ಗಾಗಿ ಕಾಯಬೇಕಾದ ಸ್ಥಿತಿ ಇದೆ. ಬೇಸಿಗೆ ಆರಂಭದಲ್ಲೇ ಹೀಗಾದರೆ ಇನ್ನೆರಡು ತಿಂಗಳು ಬೆಳೆ ಉಳಿಸಿಕೊಳ್ಳುವುದು ಹೇಗೆ?’ ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ.

ಸರ್ಕಾರ 7 ಗಂಟೆ 3 ಫೇಸ್ ವಿದ್ಯುತ್ ಪೂರೈಸುವ ಭರವಸೆ ನೀಡಿದೆ. ಆದರೆ, ಕೆಲವು ಭಾಗದ ರೈತರಿಗೆ ಸರಿಯಾಗಿ 2 ಗಂಟೆ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಪಂಪ್ಸೆಟ್ ಹೊಂದಿರುವವರು ವೋಲ್ಟೇಜ್ಗಾಗಿ ರಾತ್ರಿಯಿಡೀ ಕಾಯುವಂತಾಗಿದೆ. ಕತ್ತಲಲ್ಲಿ ಮೋಟರ್ ಶೆಡ್ ಹುಡುಕಾಡಬೇಕಾಗಿದೆ.

ರಾಜ್ಯ ಸರ್ಕಾರ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಿದೆ. ಆದರೆ, ಇದರ ಪ್ರಯೋಜನ ಸಿಗುತ್ತಿಲ್ಲ. ಫೀಡರ್ನಿಂದ ಪಂಪ್ಸೆಟ್ಗಳಿಗೆ ವಿದ್ಯುತ್ ತಲುಪುವ ಮುನ್ನವೇ ಸೋರಿಕೆಯಾಗುತ್ತಿದೆ ಎಂಬುದು ರೈತರ ಆರೋಪವಾಗಿದೆ.

ಮಲೆನಾಡಿನಲ್ಲಿ 5ರಿಂದ 6 ತಿಂಗಳು ನೀರಿನ ಅಗತ್ಯ ಕಡಿಮೆ. ಬಿಸಿಲಿಗೆ ಭೂಮಿಯ ತೇವ ಇಂಗುವುದರಿಂದ ಪಂಪ್ಸೆಟ್ಗಳ ಬಳಕೆ ಹೆಚ್ಚುತ್ತದೆ. ಬೇಸಿಗೆಯಲ್ಲಿ ಹಲವು ಗ್ರಾಮಗಳಲ್ಲಿ ಅಂತರ್ಜಲ 500 ಅಡಿಗೆ ಇಳಿದಿದ್ದು, ಕೊಳವೆಬಾವಿ ಮೂಲಕ ನೀರು ಎತ್ತಲು ಅನಿವಾರ್ಯವಾಗಿ 3 ಫೇಸ್ ಅಗತ್ಯತೆ ಹೆಚ್ಚಿದೆ.

‘ಬದಲಾಗದ ಹಳೆಯ ತಂತಿ ಮಾರ್ಗ’

ಸಿಬ್ಬಂದಿ ವಿದ್ಯುತ್ ಪರಿವರ್ತಕಗಳ (ಟಿಸಿ)ನ್ನು ಸರಿಯಾಗಿ ನಿಗಾವಹಿಸುತ್ತಿಲ್ಲ. ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ತಂತಿಗಳನ್ನು ಅಳವಡಿಸಲಾಗಿದೆ. ಕಾನು ತೋಟ ಅರಣ್ಯ ಪ್ರದೇಶಗಳಿಂದ ಬರುವ ಕೇಬಲ್ ಮೇಲೆ ಮರ ಮಟ್ಟು ಸ್ವಾಗೆ ಬಳ್ಳಿಗಳು ಹಬ್ಬಿವೆ. ಇಂದಿಗೂ ಹಳೆಯ ತಂತಿಗಳು ಉಳಿದಿವೆ. ಇದರಿಂದ ವಿದ್ಯುತ್ ಸೋರಿಕೆಯಾಗಿ ರೈತರಿಗೆ ಸಂಪೂರ್ಣ ಪ್ರಮಾಣದ ಗುಣಮಟ್ಟದ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಕಾಲಕಾಲಕ್ಕೆ ಟಿ.ಸಿ.ಗಳಿಗೆ ಬೇಕಾದ ಗ್ರೀಸ್ ಆಯಿಲ್ ಹಾಕುತ್ತಿಲ್ಲ ಎಂದು ಬಿಳಚಿಕಟ್ಟೆ ಶ್ರೀಕಾಂತ್ ಆರೋಪಿಸಿದರು.

ಕಮ್ಮರಡಿ ಕೊಪ್ಪ ಫೀಡರ್ನಲ್ಲಿ ತಾಂತ್ರಿಕ ನಿರ್ವಹಣೆಯಿಂದ ವಾರದ ಹಿಂದೆ ವಿದ್ಯುತ್ ವ್ಯತ್ಯಯವಾಗಿತ್ತು. ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿಲ್ಲ.
ಪ್ರಶಾಂತ್, ಎಇಇ ಮೆಸ್ಕಾಂ

ರೈತರಿಗೆ ಗುಣಮಟ್ಟದ 3 ಫೇಸ್ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಪವರ್ ಕಟ್ ಮಾಡುವುದಕ್ಕೆ ಸಮಯ ನಿಗದಿ ಪಡಿಸುತ್ತಿಲ್ಲ
ಕೆ.ಎ.ವಸುಪಾಲ, ಕೃಷಿಕ ಸಮಾಜದ ಖಜಾಂಚಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.