ಭಾನುವಾರ, ಜೂನ್ 20, 2021
28 °C

ಶಿವಮೊಗ್ಗ: ನಾಳೆ ರಾಮ ಮಂದಿರ ಭೂಮಿ ಪೂಜೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯ ಸಂಭ್ರಮಕ್ಕೆ ಶಿವಮೊಗ್ಗವೂ ಸಜ್ಜಾಗಿದೆ ಎಂದು ವಿಶ್ವಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬಾಬು ಜಾದವ್ ಹೇಳಿದರು.

ಶ್ರೀರಾಮ ಮಂದಿರದ ಕನಸು ಶತಮಾನಗಳ ಹೋರಾಟ. ಸಾವಿರಾರು ಸಾಧುಸಂತರ ಬೇಡಿಕೆ. ಕೊನೆಗೂ ಮಂದಿರದ ನಿರ್ಮಾಣಕ್ಕೆ ಮುಹೂರ್ತ ನಿಶ್ಚಯಿಸಲಾಗಿದೆ. ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರಮೋದಿ ಆರಂಭದ ಪೂಜೆ ನೆರವೇರಿಸುತ್ತಾರೆ. ಕೋವಿಡ್ ಕಾರಣ ಎಲ್ಲ ರಾಮಭಕ್ತರೂ ಅಯೋಧ್ಯೆಗೆ ತೆರಳಲು ಸಾಧ್ಯವಿಲ್ಲ. ಹಾಗಾಗಿ, ವಿಶ್ವಹಿಂದೂ ಪರಿಷತ್‌ ಕೇಂದ್ರೀಯ ಮಹಾಪ್ರಧಾನ ಕಾರ್ಯದರ್ಶಿ ಮಿಲಿಂದ ಪಾರಂಡೆ ಅವರು ತಮ್ಮ ಮನೆ, ಮಠ ಮಂದಿರ, ಧಾರ್ಮಿಕ ಕೇಂದ್ರಗಳಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲು ಸೂಚಿಸಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ನಗರದ ಕೋಟೆ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ 8ಕ್ಕೆಗೆ ಶ್ರೀರಾಮತಾರಕ ಹೋಮ ನಡೆಸಲಾಗುವುದು. 10 ಗಂಟೆಗೆ ಸಣ್ಣ ಸಭಾ ಕಾರ್ಯಕ್ರಮ ಇರುತ್ತದೆ. ಬೀದಿ, ಮನೆ, ಗ್ರಾಮ, ದೇವಾಲಯಗಳಲ್ಲಿ ತಳಿರುತೋರಣಗಳಿಂದ ಅಲಂಕರಿಸಲಾಗುತ್ತಿದೆ. ಭಜನೆ, ಸಂಕೀರ್ತನೆ, ಜಪ, ಪೂಜೆ, ಪುಷ್ಪಾರ್ಚನೆ, ದೂಪ, ದೀಪ, ನೈವೇದ್ಯಗಳಿಂದ ಶ್ರೀರಾಮನನ್ನು ಆರಾಧಿಸಿ ಪ್ರಸಾದ ವಿತರಿಸುವರು ಎಂದರು.

ಅಂದು ಬೆಳಿಗ್ಗೆ 10.30ಕ್ಕೆ ದೂರದರ್ಶನದಲ್ಲಿ ನೇರ ಪ್ರಸಾರ ಇರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಪರದೆ ಇಟ್ಟು ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಹಿಂದೂ ಪರಿಷತ್‌ ಪದಾಧಿಕಾರಿಗಳಾದ ಚಂದ್ರಕಾಂತ್, ಎಸ್.ಆರ್.ನಟರಾಜ್, ನಾರಾಯಣ ಜಿ.ವರ್ಣೇಕರ್, ಸತೀಶ್, ರಾಜೇಶ ಗೌಡ, ವಿ.ಕೆ.ಜೈನ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು