ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಸಂರಕ್ಷಿತ ಪ್ರದೇಶ ಕೈಬಿಡಲು ಆಗ್ರಹ

Last Updated 28 ಜುಲೈ 2020, 12:37 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾ ಹುಲಿ ಸಂರಕ್ಷಿತಪ್ರದೇಶ ಘೋಷಣೆಯಅಧಿಸೂಚನೆ ಕೈಬಿಡಬೇಕು ಎಂದು ಆಗ್ರಹಿಸಿ ಉಂಬ್ಲೆಬೈಲು ನಾಗರಿಕ ಸಮಿತಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಮೂಲಕ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಸಚಿವಾಲಯದ ಕಾರ್ಯದರ್ಶಿಗೆಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ಉಂಬ್ಲೆಬೈಲು, ಕಾಕನಹೊಸೂಡಿ ಹಾಗೂ ಲಿಂಗಾಪುರ ಗ್ರಾಮದ ಜನವಸತಿ ಮತ್ತು ಕೃಷಿ ಭೂಮಿ ಒಳಗೊಂಡ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶ,ಪರಿಸರ ಸೂಕ್ಷ್ಮವಲಯಎಂದು ಅಧಿಸೂಚನೆ ಹೊರಡಿಸಲಾಗಿದೆ.ಇಂತಹ ನಿರ್ಧಾರಅವೈಜ್ಙಾನಿಕ.ಕೃಷಿ ಅವಲಂಬಿತರ ಬದುಕು, ಅಭಿವೃದ್ದಿ, ಸಾಂಸ್ಕೃತಿಕ ಹಕ್ಕುಗಳುಮೊಟಕುಗೊಳ್ಳುತ್ತವೆ.ಗ್ರಾಮಗಳಲ್ಲಿ ಸಭೆಗಳನ್ನು ನಡೆಸದೇ, ಅಭಿಪ್ರಾಯ ಸಂಗ್ರಹಿಸಿದೆ ಅವಾಸ್ತವಿಕವಾಗಿ ಅಧಿಸೂಚನೆ ಹೊರಡಿಸಿರುವುದು ಜನವಿರೋಧಿ ಧೋರಣೆ ಎಂದು ಆರೋಪಿಸಿದರು.

ಘೋಷಿತ ಪ್ರದೇಶದವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಸಾಗುವಳಿಹಕ್ಕನ್ನೇಕಳೆದುಕೊಳ್ಳುತ್ತಾರೆ. ಭೂಗಳ್ಳರ ಹಣೆಪಟ್ಟಿ ಕಟ್ಟಿಕೊಂಡು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಾರೆ. ಭೂಮಿ ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ತಕ್ಷಣ ಅಧಿಸೂಚನೆ ವ್ಯಾಪ್ತಿಯಿಂದ ಉಂಬ್ಲೆಬೈಲು, ಕಾಕನಹೊಸೂಡಿ ಹಾಗೂ ಲಿಂಗಾಪುರ ಗ್ರಾಮಗಳನ್ನು ಕೈಬಿಡಬೇಕು ಎಂದುಆಗ್ರಹಿದರು.

ನಾಗರಿಕ ಸಮಿತಿ ಸಂಚಾಲಕ ಬಿ.ಎ.ರಮೇಶ್ ಹೆಗ್ಡೆ, ಅನಿಲ್, ಗಣೇಶ್, ರಾಜುಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT