ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಹಯ್ಯ ಲಾಲ್‌ ಹತ್ಯೆ ಖಂಡಿಸಿ ಪ್ರತಿಭಟನೆ; ಅಂಗಡಿ ಗಾಜು ಪುಡಿ

Last Updated 4 ಜುಲೈ 2022, 4:36 IST
ಅಕ್ಷರ ಗಾತ್ರ

ಭದ್ರಾವತಿ: ಟೇಲರ್ ಕನ್ಹಯ್ಯ ಲಾಲ್‌ ಹತ್ಯೆ ಆರೋಪಿಗಳನ್ನು ಗಲ್ಲಿಗೆ ಹಾಕಬೇಕು ಎಂದು ಬಜರಂಗದಳ ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆ ನಡೆಸಿ, ಹತ್ಯೆಕೋರರ ಪ್ರತಿಕೃತಿ ದಹಿಸಲಾಯಿತು.

ರಂಗಪ್ಪವೃತ್ತದಲ್ಲಿ ಬಜರಂಗದಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿ ಹತ್ಯೆ ಘಟನೆ ಖಂಡಿಸಿದರು.

ಬಜರಂಗದಳ ಮುಖಂಡ ವಡಿವೇಲು, ಕಿರಣ್, ಉಮೇಶ್, ಮಣಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹಲ್ಲೆ, ಅಂಗಡಿ ಗಾಜು ಹಾನಿ: ಬಜರಂಗದಳದ ಪ್ರತಿಭಟನೆ, ಪ್ರತಿಕೃತಿ ದಹನ ನಂತರ ರಂಗಪ್ಪವೃತ್ತದ ಮೂಲೆಯಲ್ಲಿರುವ ಸ್ವಾಗ್ ಮೆನ್ಸ್ ಫ್ಯಾಷನ್ ಅಂಗಡಿಯ ಗಾಜು ಒಡೆದಿದೆ.

ಅಂಗಡಿಯ ಬಳಿ ಇದ್ದ ಅನ್ಯ ಕೋಮಿನ ಯುವಕರಿಬ್ಬರು ಪ್ರತಿಭಟನೆ ಕುರಿತು ಕೇವಲವಾಗಿ ಮಾತನಾಡಿದರು ಎಂದು ಆರೋಪಿಸಿ ಪ್ರತಿಭಟನೆಯಲ್ಲಿದ್ದ ಕೆಲವರು ಅವರನ್ನು ಪ್ರಶ್ನಿಸಿ ಹಲ್ಲೆ ನಡೆಸಿದರು. ಈ ವೇಳೆ ತಳ್ಳಾಟದಲ್ಲಿ ಅಂಗಡಿಯ ಗಾಜು ಒಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತಂದರು. ಜತೆಗೆ ಪ್ರತಿಭಟನೆ ಕುರಿತು ಅವಹೇಳನವಾಗಿ ಮಾತನಾಡಿದ ಇಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT