ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಗ್ಗಾನ್ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ

Last Updated 28 ಜುಲೈ 2020, 13:58 IST
ಅಕ್ಷರ ಗಾತ್ರ

ಶಿವಮೊಗ್ಗ: ಕೋವಿಡ್‌ ರೋಗಿಗಳಿಗೆಮೆಗ್ಗಾನ್ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಿಸಿ ಸಿಟಿಜನ್‌ ಯುನೈಟೆಡ್‌ ಮೂವ್ಮೆಂಟ್‌‌ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಮುಂದೆ ಪ್ರತಿಭಟನೆ ನಡೆಸಿದರು.

ಮೆಗ್ಗಾನ್ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ವೆಂಟಿಲೇಟರ್ ಸರಿಯಾಗಿ ಸಿಗುತ್ತಿಲ್ಲ. ಆಕ್ಸಿಜನ್ ಇಲ್ಲ. ಸ್ವಚ್ಛತೆ ಮೊದಲೇಇಲ್ಲ. ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆನೀಡುತ್ತಿಲ್ಲ. ಇದರಿಂದ ಸೋಂಕಿತರುಜೀವ ಕಳೆದುಕೊಳ್ಳುತ್ತಿದ್ದಾರೆಎಂದು ಆರೋಪಿಸಿದರು.

ಬಡವರಿಗೆ ಮತ್ತು ಶ್ರೀಮಂತರಿಗೆ ಇಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಸಾಮಾನ್ಯ ಜ್ವರ, ಕೆಮ್ಮು, ನೆಗಡಿ ಇದ್ದರೂ ಮೆಗ್ಗಾನ್ ಆಸ್ಪತ್ರೆಯಲ್ಲೆ ತೋರಿಸಬೇಕು. ಹಾಗಾಗಿ, ಅಲ್ಲಿಗೆ ಹೋದರೆ ಭಯವೇ ಆಗುತ್ತದೆ.ಗಂಟಲು ದ್ರವ ಪರೀಕ್ಷೆಯೂವಿಳಂಬವಾಗುತ್ತಿದೆಎಂದು ದೂರಿದರು.

ಜಿಲ್ಲಾಡಳಿತ ತಕ್ಷಣವೇ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸಬೇಕು. ವೆಂಟಿಲೇಟರ್ ಮತ್ತು ಆಕ್ಸಿಜನ್ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು.ಮೃತ ದೇಹಗಳನ್ನು ಕವರಿಂಗ್ ಮಾಡುವ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.ಸರ್ಕಾರಿಆಸ್ಪತ್ರೆಗಳಲ್ಲಿ ಸಾಧಾರಣ ಜ್ವರ, ಕೆಮ್ಮ, ನೆಗಡಿಗೆ ಚಿಕಿತ್ಸೆ ನೀಡಲು ಒಪಿಡಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಷಹರಾಜ್ ಮುಜಾಹಿದ್ ಸಿದ್ದಿಕಿ, ಜಫ್ರುಲ್ಲಾ ಸತ್ತಾರ್ ಖಾನ್, ಮುಜಮಿಲ್ ಅನ್ವರ್, ಸೈಯದ್ ಫಸಿವುಲ್ಲಾ, ಶೇಖ್ ಆಲಿ, ಮೊಹಮ್ಮದ ರಫಿಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT